ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಎಂಟಿಸಿ ಪಾಲಿಗೆ ಬಿಳಿಯಾನೆಯಾದ ಎಲೆಕ್ಟ್ರಿಕ್ ಬಸ್..!

ಬೆಂಗಳೂರು: ಬೆಂಗಳೂರಿಗರ ಸಂಚಾರದ ಜೀವನಾಡಿ ಬಿಎಂಟಿಸಿ ನಷ್ಟದ ಸುಳಿಯಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಎಂಟಿಸಿಯ ಇವತ್ತಿನ ಸ್ಥಿತಿಗೆ ವೋಲ್ವೋ ಮಾರ್ಕೋ ಪೋಲೋ ಬಸ್‌ಗಳ ಕೊಡುಗೆ ಬಹಳ ದೊಡ್ಡದಿದೆ. ಇದರ ಲೀಸ್ಟ್‌ಗೆ ಈಗ ಎಲೆಕ್ಟ್ರಿಕ್ ಬಸ್ ಸೇರಿಕೊಂಡಿದೆ. ಎಲೆಕ್ಟ್ರಿಕ್ ಬಸ್ ಇದೇ ರೀತಿ ಇನ್ನೊಂದು ಸ್ವಲ್ಪ ದಿನ ಓಡಿದರೆ ಬಿಎಂಟಿಸಿ ‘ಬೀದಿ ಬಸವ’ ಆಗೋದರಲ್ಲಿ ಅನುಮಾನವೇ ಇಲ್ಲ. ಇಕೋ ಫ್ರೆಂಡ್ಲಿ ಬಸ್ ರಸ್ತೆಗಿಳಿಸ್ತೀವಿ, ಮಾಲಿನ್ಯವನ್ನ ಝೀರೋ ಮಾಡ್ತೀವಿ ಅಂತ ಕೋಟಿ ಕೋಟಿ ಸುರಿದು ಎಲೆಕ್ಟ್ರಿಕ್ ಬಸ್ ರಸ್ತೆಗಿಳಿಸಿತು. ಆದರೆ ಇದರ ನಿರ್ವಹಣೆ ಎನ್ನುವುದು ಬಿಎಂಟಿಸಿ ಪಾಲಿಗೆ ‘ಬಿಳಿಯಾನೆ’ಯಂತೆ ಆಗಿದೆ.

ಎಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗೆ ಇಳಿಸೋದ್ರಿಂದ ನಿಗಮಕ್ಕೆ ಪ್ರತಿ ತಿಂಗಳು ಕನಿಷ್ಟ 4 ಕೋಟಿ 89 ಲಕ್ಷದ 24 ಸಾವಿರ ರೂ ನಷ್ಟ ಸಂಭವಿಸಲಿದೆ.ಇನ್ನೂ ಬಸ್ ಗೆ ಜನ ಬರ್ಲಿ ಬಾರದಿರ್ಲಿ ಪ್ರತೀ ಕಿಲೋಮೀಟರ್ಗೆ 51 ರೂ 60 ಪೈಸೆ ಯಂತೆ 180 ಕಿಲೋಮೀಟರ್ಗೆ 9.288ರೂಗಳನ್ನ ನಿತ್ಯ NTPS ಕಂಪನಿಗೆ ಪಾವತಿ ಮಾಡ್ಬೇಕು. ಆದ್ರೆ ಒಂದು ಎಲೆಕ್ಟ್ರಿಕ್ ಬಸ್ನಿಂದ ಪ್ರತಿನಿತ್ಯ ಟಿಕೆಟ್ ಪೇರ್ ಕಲೆಕ್ಷನ್ ಆಗ್ತಿರೋದು 5,868 ರೂ ಮಾತ್ರ. ಹೀಗಾಗಿ ಪ್ರತಿನಿತ್ಯ ಒಂದು ಎಲೆಕ್ಟ್ರಿಕ್ ಬಸ್ ರಸ್ತೆಗಿಳಿದ್ರೆ ನಿಗಮಕ್ಕೆ 3420ರೂ ನಷ್ಟವಾಗ್ತಿದೆ.

NTPC ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡ ಕಾರಣದಿಂದಾಗಿ ನಷ್ಟವಾಗ್ತಿದೆ. ನಿಗಮಕ್ಕೆ ಆರ್ಥಿಕ ಹೊರೆಯಾಗ್ತಿದೆ ಅನ್ನೋದು ಗೊತ್ತಿದ್ರೂ ನಿಗಮ ಮತ್ತೆ 300 ಹೊಸ ಎಲೆಕ್ಟ್ರಿಕ್ ಬಸ್ ಖರೀದಿಗೆ ಮುಂದಾಗಿದೆ. ಈ ಬಾರಿ ಅಶೋಕ್ ಲೈಲೆಂಡ್ ಕಂಪನಿ ಜೊತೆಗೆ ಒಪ್ಪಂದ ಏರ್ಪಡುತ್ತಿದ್ದು ಒಂದು ಕಿಮೀಗೆ 48 ರೂ.ನಂತೆ ನಿತ್ಯ ಒಂದು ಬಸ್ಗೆ ಮಿನಿಮಮ್ 210 ಕಿಲೋಮೀಟರ್ ನಂತೆ ಒಡಂಬಡಿಕೆ ಮಾಡಿಕೊಳ್ಳಲಾಗ್ತಿದೆ.

ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By : Manjunath H D
Kshetra Samachara

Kshetra Samachara

14/05/2022 06:17 pm

Cinque Terre

3.46 K

Cinque Terre

0

ಸಂಬಂಧಿತ ಸುದ್ದಿ