ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಘಾಟಿ ಕ್ಷೇತ್ರದಲ್ಲಿ ʼಮರ್ಕಟ ಕಾದಾಟʼ; ಬಳಲಿ ಬಿದ್ದ ಕೋತಿಗೆ ಚಿಕಿತ್ಸೆ

ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯದ ದೇವಾಲಯದ ಬಳಿ ಎರಡು ಕೋತಿಗಳ ನಡುವೆ ಕಾಳಗ ನಡೆದು, ಪರಸ್ಪರ ಭೀಕರವಾಗಿ ʼಕಚ್ಚಾಡಿʼಕೊಂಡಿದ್ದರಿಂದ ಒಂದು ಕೋತಿ ಬಲಹೀನಗೊಂಡು ಅಸ್ವಸ್ಥವಾಗಿ ಕೆಳಗೆ ಬಿದ್ದು ಬಿಟ್ಟಿದೆ.

ಗಾಯಾಳು ಮರ್ಕಟದ ಸ್ಥಿತಿ ಗಮನಿಸಿದ ಘಾಟಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಪ್ರಧಾನ ಅರ್ಚಕ ಸುಬ್ಬುಕೃಷ್ಣ ಶಾಸ್ತ್ರಿ ಅವರು ಪ್ರಾಣಿ- ಪಕ್ಷಿ ದಾಸೋಹ ಸೇವಾ ಟ್ರಸ್ಟ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಪಂದಿಸಿ ಸ್ಥಳಕ್ಕೆ ಧಾವಿಸಿದ ಟ್ರಸ್ಟ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮ್ ಕುಮಾರ್ ಮತ್ತು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿಜಯ್, ಹಾಡೋನಹಳ್ಳಿಯ ವೆಟರ್ನರಿ‌ ವೈದ್ಯರಾದ ಅರುಣ್ ಅವರನ್ನು ಸ್ಥಳಕ್ಕೆ ಕರೆಯಿಸಿ, ಅಸ್ವಸ್ಥಗೊಂಡಿದ್ದ ಕೋತಿರಾಯನಿಗೆ ಸಕಾಲಿಕ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

06/05/2022 07:30 pm

Cinque Terre

918

Cinque Terre

1

ಸಂಬಂಧಿತ ಸುದ್ದಿ