ರಾಜರಾಜೇಶ್ವರಿ ನಗರ : ಹಬ್ಬ ಹರಿದಿನ, ಜಾತ್ರೆ ಸೇರಿದಂತೆ ಯಾವುದೋ ವಾರ್ಷಿಕ ಸಮಾರಂಭಗಳಲ್ಲಿ ಅನ್ನದಾಸೋಹ ಮಾಡೋರನ್ನ ನೋಡಿದ್ದೇವೆ.. ಆದ್ರೆ ಇಲ್ಲೊಬ್ರು ತನ್ನ ತಾಯಿಯ ಕನಸ್ಸನ್ನು ಈಡೇರಿಸುವ ಸಲುವಾಗಿ ಪ್ರತಿನಿತ್ಯ ಅನ್ನದಾಸೋಹ ನಡೆಸ್ತಿದ್ದಾರೆ.. ಕೂಲಿ ಕಾರ್ಮಿಕರಿಗೆ ಹಾಗೂ ಹಸಿದವರ ಹೊಟ್ಟೆ ತುಂಬಿಸೋ ಕಾಯಕದಲ್ಲಿ ನಿರತರಾಗಿದ್ದಾರೆ.. ದಿನಂಪ್ರತಿ ಏನಿಲ್ಲ ಅಂದ್ರು 300 ರಿಂದ 350 ಜನರ ಹೊಟ್ಟೆ ತುಂಬಿಸುವ ಮಹಾನ್ ಕಾರ್ಯ ಮಾಡ್ತಿದ್ದಾರೆ.. ಅಷ್ಟಕ್ಕೂ ಈ ಮಹಾನ್ ಸೇವೆ ನಡೆಯುತ್ತಿರೋದು ರಾಜರಾಜೇಶ್ವರಿ ನಗರದಲ್ಲಿ.. ಇಲ್ಲಿನ ಬಿಬಿಎಂಪಿ ಕಚೇರಿ ಮುಂಭಾಗದ ರಸ್ತೆಯಲ್ಲಿರುವ ರಾಜೇಶ್ವರಿ ಆರ್ಟ್ಸ್ ಎಂಬ ಬಿಲ್ಡಿಂಗ್ ನಲ್ಲಿ ನಿತ್ಯ ಅನ್ನ ಸಂತರ್ಪಣೆ ನಡೆಯುತ್ತಲೇ ಇರುತ್ತೆ..
ಹೀಗೆ ನಿತ್ಯ ಅನ್ನ ದಾಸೋಹ ಮಾಡ್ತಿರೋ ವ್ಯಕ್ತಿಯ ಬಗ್ಗೆ ಸ್ಟೋರಿ ಮಾಡಲು ಹೋದಾಗ ಆ ವ್ಯಕ್ತಿ ಕ್ಯಾಮೆರಾ ಮುಂದೆಯೂ ಬರಲಿಲ್ಲ. ಅವ್ರ ಹೆಸ್ರು ಕೂಡಾ ಹೇಳಲಿಲ್ಲ. ಕೊನೆಗೂ ಮಾಹಿತಿ ಕೆದಕುತ್ತಾ ಹೋದಾಗ ಗೊತ್ತಾಗಿದ್ದು ಅವ್ರು ರಾಜೇಶ್ವರಿ ಆರ್ಟ್ಸ್ ಮಾಲೀಕ ಭರತ್ ಅಂತ..
ಪ್ರತಿದಿನ ಭರತ್ ಅವ್ರು ಕುಟುಂಬದವರನ್ನ ಕರೆದ್ಕೊಂಡು ಬಂದು,ತಾವೇ ಖುದ್ದಾಗಿ ಊಟ ಬಡಿಸುತ್ತಾರೆ.. ತಂದೆ ತಾಯಿಯನ್ನು ನಿರ್ಲಕ್ಷ್ಯ ಮಾಡೋ ಮಕ್ಕಳ ನಡುವೆ ತಾಯಿಯ ಆಸೆ ಈಡೇರಿಸಲು ಇಂತಹ ಮಹತ್ಕಾರ್ಯ ಮಾಡ್ತಿರೋ ಭರತ್ ನಿಜಕ್ಕೂ ಮಾದರಿ ವ್ಯಕ್ತಿ ಎನಿಸಿದ್ದಾರೆ.
-ರಂಜಿತಸುನಿಲ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು..
PublicNext
25/03/2022 07:08 pm