ಬೆಂಗಳೂರು: ಮೊನ್ನೆ ಮಳೆಗೆ ಇಲ್ಲಿಯ ಅಂಡರ್ ಪಾಸ್‌ಗಳು ನೀರಿನಿಂದ ತುಂಬಿ ಹೋಗಿವೆ. ಇದರಿಂದ ವಾಹನ ಸಂಚಾರಕ್ಕೂ ತೊಂದರೆ ಆಗಿದೆ. ಇದಕ್ಕೆ ತಾಜಾ ಉದಾಹರಣೆ ಸಾಕಷ್ಟಿವೆ. ಆದರೆ ಕಾರ್ಯನಿರತ ಟ್ರಾಫಿಕ್ ಪೊಲೀಸ್ ಒಬ್ಬರು ಒಂದು ಅದ್ಭುತ ಕೆಲಸ ಮಾಡಿದ್ದಾರೆ. ಅದೇನೂ ಅಂತ ತೋರಿಸ್ತೀವಿ ನೋಡಿ.
ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪ ಅಂಡರ್ ಪಾಸ್ ನೀರಿನಿಂದ ತುಂಬಿ ಹೋಗಿತ್ತು. ಅದರಿಂದ ಅಲ್ಲಿಯ ವಾಹನ ಸಂಚಾರಕ್ಕೂ ತೊಂದರೆ ಆಗುತ್ತಿತ್ತು. ಅದನ್ನ ಗಮನಿಸಿದ ಕಾರ್ಯನಿರತ ಟ್ರಾಫಿಕ್ ಪೊಲೀಸ್ ತಾವೇ ಸರಿ ಮಾಡಲು ಮುಂದಾದರು.
ಹೌದು.ಅಂಡರ್ ಪಾಸ್ ನಲ್ಲಿ ನಿಂತ ನೀರನ್ನ ಹೋಗುವಂತೆ ಮಾಡಲು ಅಲ್ಲಿದ್ದ ಕಸವನ್ನ ತಾವೇ ತೆಗೆದರು. ಅದರಿಂದ ಅಂಡರ್ ಪಾಸ್ ನಲ್ಲಿ ನಿಂತಿತ್ತ ನೀರೆಲ್ಲ ಹರಿದು ಮೋರಿ ಸೇರಿತು. ಈ ಒಂದು ಕೆಲಸವನ್ನ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಡಿಸಿಪಿ ಟ್ರಾಫಿಕ್ ಈಸ್ಟ್ ಟ್ವಿಟರ್ ಪೇಜ್ ನಲ್ಲೂ ಈ ಒಂದು ಒಳ್ಳೆ ಕೆಲಸ ವೀಡಿಯೋ ಶೇರ್ ಆಗಿದೆ. ಅನೇಕರ ಮೆಚ್ಚುಗೆಗೂ ಪಾತ್ರವಾಗಿದೆ
PublicNext
22/03/2022 12:54 pm