ಬೆಂಗಳೂರು: ಒಂದು ಕಡೆ ಟ್ರಾಫಿಕ್ ಪೊಲೀಸರ ಟೋಯಿಂಗ್ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ನಿಷ್ಟಾವಂತ ಪೊಲೀಸರು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿರುತ್ತಾರೆ ಎಂಬುದಕ್ಕೆ ಈ ಮಾನವೀಯ ಘಟನೆ ಸಾಕ್ಷಿಯಾಗಿದೆ.
ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಕಾಶಪ್ಪ ಕಲ್ಲೂರು ಅವರು ತಮ್ಮ ಸಮಯ ಪ್ರಜ್ಞೆಯಿಂದ ಒಂದು ಅಮೂಲ್ಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ಲೋಬಲ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ರೋಗಿಯನ್ನು ಹೊತ್ತುಕೊಂಡು ನಿನ್ನೆ ಮಧ್ಯಾಹ್ನ ಚಾಲುಕ್ಯ ಸರ್ಕಲ್ ಬಳಿ ಇರುವ ಸಿಐಡಿ ಕಚೇರಿ ಬಳಿ ಬರುವಾಗ ಆ್ಯಂಬುಲೆನ್ಸ್ ಟೈರ್ ಪಂಕ್ಚರ್ ಆಗಿದೆ. ಎಮರ್ಜೆನ್ಸಿ ಎಂಬ ಕಾರಣಕ್ಕೆ ರೋಗಿಯ ಪತ್ನಿ ಮತ್ತು ಮಗಳು ಸತತ 10 ಆಂಬುಲೆನ್ಸ್ ಗೆ ಕರೆ ಮಾಡಿದ್ದರು. ಯಾವುದೆ ವಾಹನಗಳು ಬರಲಿಲ್ಲ . ಒಳಗೆ ರೋಗಿಯ ನರಳಾಟ ಹೆಚ್ಚಾಗಿತ್ತು. ದುಃಖದಲ್ಲಿದ್ದ ಮಹಿಳೆಯರು ಕಣ್ಣೀರಿಡುತ್ತಿದ್ದರು. ಇದೇ ವೇಳೆ ಅಲ್ಲಿಗೆ ಸಂಚಾರಿ ಕಾನ್ಸ್ಟೇಬಲ್ ಕಾಶಪ್ಪ ಕಲ್ಲೂರು ವಾಹನದ ಟೈರ್ ಬದಲಿಸಲು ಚಾಲಕನಿಗೆ ಸಹಾಯ ಮಾಡಿದ್ದಾರೆ.
ಕಷ್ಟ ಕಾಲದಲ್ಲಿ ಸಹಾಯಕ್ಕೆ ಬಂದ ಕಾನ್ಸ್ಟೇಬಲ್ ಕಾಶಪ್ಪ ಕಲ್ಲೂರ್‌ಗೆ ತಾಯಿ-ಮಗಳು ಹೃದಯಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.
ಇನ್ನು ಆಂಬುಲೆನ್ಸ್‌ನ ಟಯರ್ ಹಾಕಿ ಹೊರಡುವಾಗ ಬೇರೊಂದು ಆಂಬುಲೆನ್ಸ್ ಬಂದಿದೆ. ಎಮರ್ಜೆನ್ಸಿ ಸಂಧರ್ಭದಲ್ಲಿ ಹತ್ತಕ್ಕೂ ಹೆಚ್ಚು ಕರೆ ಮಾಡಿದ್ರೂ ಯಾವ ಆ್ಯಂಬುಲೆನ್ಸ್ ಸಿಬ್ಬಂದಿ ಸ್ಪಂದಿಸಲಿಲ್ಲ. ಕೊನಗೆ ಪೊಲೀಸ್ ಕಾನ್ಸ್ಟೇಬಲ್ ಸಹಾಯದಿಂದ ಕೊನೆಗೂ ಆಂಬುಲೆನ್ಸ್ ಆಸ್ಪತ್ರೆ ತಲುಪಿದೆ.
PublicNext
02/02/2022 11:06 pm