ಬೆಂಗಳೂರು: ಮಾನವೀಯತೆಯ ಮಾತುಗಳನ್ನು ಕೆಲವರು ಭಾಷಣ ಮಾಡುವಾಗ ಅಥವಾ ಇತರರ ಮುಂದೆ ಹೀರೋ ಎಂದೆನಿಕೊಳ್ಳುವಾಗ ಹೇಳುತ್ತಾರೆ. ಆದರೆ ಮಾನವೀಯ ಗುಣಗಳು ಭಾಷಣ ಬಿಗಿಯುವವರಿಗೇ ಇರುವುದಿಲ್ಲ. ಹಾಗಂತ ಎಲ್ಲರೂ ಈ ವರ್ಗಕ್ಕೆ ಸೇರುವುದಿಲ್ಲ.
ಪೊಲೀಸರ ಮಾನವೀಯತೆಗೆ ಮತ್ತೊಂದು ಘಟನೆ ಸಾಕ್ಷಿಯಾದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಹೊಂಡದಂತಾಗಿವೆ. ಹೀಗೆ ಕೆ.ಆರ್ ಮಾರ್ಕೆಟ್ ಫ್ಲೈ ಓವರ್ ಮೇಲೆ ನಿಂತಿದ್ದರಿಂದ ಸವಾರರು, ಚಾಲಕರು ಪರದಾಡುವಂತಾಗಿತ್ತು. ಇದನ್ನು ಗಮನಿಸಿದ ಸಂಚಾರಿ ಪೊಲೀಸ್ ಪೇದೆಯೊಬ್ಬರು ಕಾರ್ಯಪ್ರವೃತ್ತರಾಗಿ ಫ್ಲೈ ಓವರ್ ಮೇಲಿನ ನೀರು ತೆರವುಗೊಳಿಸಿದರು. ಪೇದೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
Kshetra Samachara
06/10/2021 12:15 pm