ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ಸ್ವಾವಲಂಬಿ ಬಡ ಹೆಣ್ಣುಮಕ್ಕಳಿಗೆ ಟೈಲರಿಂಗ್ ತರಬೇತಿ ನೀಡಿ ಟೈಲರಿಂಗ್ ಮಿಷಿನ್ ವಿತರಣೆ

ಸ್ತ್ರೀಸಬಲೀಕರಣದಿಂದ ಮಾತ್ರ ದೇಶ ಸಮೃದ್ಧಿಯಾಗಲು ಸಾಧ್ಯ. ಹೆಣ್ಣು ವಿದ್ಯೆ ಕಲಿತು ಸದೃಢರಾದರೆ ಸಮಾಜ ಸುಭೀಕ್ಷವಾಗ್ತದೆ. ಈ ನಿಟ್ಟಿನಲ್ಲಿ ಯಲಹಂಕ ತಾಲೂಕು ಬಿಜೆಪಿ ಘಟಕ ಮತ್ತು ವಿಶ್ವವಾಣಿ ಫೌಂಡೇಶನ್ ಸ್ತ್ರೀಯರ ಸಶಕ್ತೀಕರಣಕ್ಕೆ ಮುಂದಾಗಿದೆ. ಯಲಹಂಕ ವಿಧಾನಸಭಾ ಕ್ಷೇತ್ರದ ಕೆಂಪೇಗೌಡ ವಾರ್ಡ್ ಒಂದರ ಸುರಭೀ ಲೇಔಟ್, ಶಿವನಹಳ್ಳಿಯ 110ಜನ ಬಡ, ಪ್ರತಿಭಾವಂತ ಮಹಿಳೆಯರಿಗೆ ಒಂದು ತಿಂಗಳ ತರಬೇತಿ ನೀಡಿದೆ.

ನುರಿತ ಶಿಕ್ಷಕರಿಂದ ಟೈಲರಿಂಗ್ ತರಬೇತಿ ನೀಡಿ, ಟೈಲರಿಂಗ್ ಕಲಿತ 110ಜನ ಪ್ರಶಿಕ್ಷಣಾರ್ಥಿ ಮಹಿಳೆಯರಿಗೆ ಯಲಹಂಕ ಬಿಜೆಪಿ ಘಟಕ ಹಾಗೂ ವಿಶ್ವವಾಣಿ ಫೌಂಡೇಶನ್ ನಿಂದ ಯಲಹಂಕ ರೈತರ ಸಂತೆ ಸಮೀಪದ ಕಣ್ವಮಠದಲ್ಲಿ ಟೈಲರಿಂಗ್ ಯಂತ್ರಗಳನ್ನು ವಿತರಿಸಲಾಯಿತು.

ಮಹಿಳೆಯರ ಶಕ್ತಿ ಮತ್ತು ಜೀವನ ಅಭಿವೃದ್ಧಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ವಿಶ್ವವಾಣಿ ಫೌಂಡೇಶನ್ ದುಡಿಯುತ್ತಿದೆ ಎಂದು ತರಬೇತಿ ಪಡೆದ ಮಹಿಳೆ ಧನ್ಯವಾದ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

22/03/2022 01:08 pm

Cinque Terre

2.27 K

Cinque Terre

0

ಸಂಬಂಧಿತ ಸುದ್ದಿ