ಆನೇಕಲ್: ಕ್ಷೇತ್ರ ಶಿಕ್ಷಣಾಧಿಕಾರಿ ನರಸಿಂಹರಾಜುಗೆ ಬೀಳ್ಕೊಡುಗೆ ಸಮಾರಂಭ ಹಾಗೂ ನೂತನವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆಗಿ ಆಯ್ಕೆಯಾಗಿರುವ ಜಯಲಕ್ಷ್ಮಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ ಆನೇಕಲ್ ಪಟ್ಟಣದ ಗುರುಭವನದಲ್ಲಿ ಏರ್ಪಡಿಸಲಾಗಿತ್ತು.
ಇದೇ ಮೊಟ್ಟಮೊದಲ ಬಾರಿಗೆ ಮಹಿಳಾ ನೂತನ ಶಿಕ್ಷಣಾಧಿಕಾರಿ ಜಯಲಕ್ಷ್ಮಿ ಅಧಿಕಾರ ಸ್ವೀಕಾರ ಮಾಡಿದ್ದು ಬಳಿಕ ಶಿಕ್ಷಣ ಸಹದ್ಯೋಗಿಗಳು ಸನ್ಮಾನ ಮಾಡಿ ಗೌರವಿಸಲಾಯಿತು. ಇನ್ನು ಈ ಹಿಂದೆ ಕ್ಷೇತ್ರ ಶಿಕ್ಷಣಧಿಕಾರಿಯಾಗಿದ್ದ ನರಸಿಂಹರಾಜು ಅಧಿಕಾರವನ್ನು ಜಯಲಕ್ಷ್ಮಿಗೆ ಹಸ್ತಾಂತರ ಮಾಡಿದರು.
ಇನ್ನು ಜಯಲಕ್ಷ್ಮಿ ಕನಕಪುರ ತಾಲೂಕಿನಲ್ಲಿ ದಕ್ಷ ಮತ್ತು ಪ್ರಾಮಾಣಿಕವಾಗಿ ಗುರುತಿಸಿಕೊಂಡಿದ್ದರು ಆನೇಕಲ್ಲಿನ ಸಹ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸಲಿ ಅಂತ ಹಾರೈಕೆ ಮಾಡಿದರು. ಇನ್ನು ಈ ಕಾರ್ಯಕ್ರಮದಲ್ಲಿ ಆನೇಕಲ್ ತಾಲೂಕಿನ ಶಿಕ್ಷಕರ ವೃಂದ ಭಾಗಿಯಾಗಿದ್ದರು.
Kshetra Samachara
30/06/2022 06:35 pm