ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜಿಲ್ಲಾಡಳಿತದಿಂದ ಆಯೋಜಿಸಿದ್ದ ಆರೋಗ್ಯ ಮೇಳದಲ್ಲಿ ‌ನಾಡಗೀತೆಗೆ ಅವಮಾನ

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಹೊಸಕೋಟೆ ನಗರದ ಚನ್ನ ಬೈರೇಗೌಡ ಕ್ರೀಡಾಂಗಣದಲ್ಲಿ ಬೃಹತ್ ಆರೋಗ್ಯ ಮೇಳವನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಅವರು ಭಾಗಿವಹಿಸಬೇಕಿತ್ತು. ಇವರ ಬದಲಿಗೆ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಆರೋಗ್ಯ ಶಿಬಿರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, ತಾಲೂಕು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಜೊತೆಗೆ ನೂರಾರು ಜನ ಭಾಗವಹಿಸಿದ್ದರು.

ಇದೇ ವೇಳೆ ಯೋಗ ಶಿಕ್ಷಕರ ‌ಸಹಜ‌ ಮಾತಿಗೆ ಶಾಸಕ‌ ಶರತ್ ಬಚ್ಚೇಗೌಡ ಯೋಗದ ಸೂರ್ಯ ನಮಸ್ಕಾರ ಪ್ರತಿಬಿಂಬಿಸುವ ಯೋಗಾಸನ ಮಾಡಿ ನೆರೆದಿದ್ದ ಜನತೆಯಲ್ಲಿ ಅಚ್ಚರಿ ಮೂಡಿಸಿದರು. ಇದೇ ವೇಳೆ ಮಾತನಾಡಿದ ಶಾಸಕರು ಕೊರೊನಾ ವೇಳೆ ಆರೋಗ್ಯ ಇಲಾಖೆ ಪಟ್ಟಿರುವ ಶ್ರಮಕ್ಕೆ ಎಷ್ಟು ಧನ್ಯವಾದ ಅರ್ಪಿಸಿದರು ಕಡಿಮೆಯೇ ಎಂದರು.

ಆರೋಗ್ಯ ಮೇಳದ ಕಾರ್ಯಕ್ರಮದ ಉದ್ಘಾಟನೆ ವೇಳೆ ನಾಡಗೀತೆಗೆ ಅಗೌರವ ಸಲ್ಲಿಸಿದ ಘಟನೆಯೂ ನಡೆದಿದೆ. ಕಾರ್ಯಕ್ರಮ ಉದ್ಘಾಟನೆ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ನಗರಸಭೆಯ ಚುನಾಯಿತ ಪ್ರತಿನಿಧಿಗಳು ನಾಡಗೀತೆಗೆ ಅಗೌರವ ತೋರಿದ್ದಾರೆ. ನಾಡಗೀತೆ ಹಾಡುತ್ತಿರುವ ವೇಳೆ ಗೌರವ ಸೂಚಿಸದೆ ದೀಪ ಬೆಳಗುವಲ್ಲಿ ಆತುರ ತೋರಿದ್ದು ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ.

ಸುರೇಶ್ ಬಾಬು Public Next ಹೊಸಕೋಟೆ..

Edited By :
PublicNext

PublicNext

20/04/2022 11:03 pm

Cinque Terre

44.78 K

Cinque Terre

0

ಸಂಬಂಧಿತ ಸುದ್ದಿ