ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲದಲ್ಲಿ ವೀಕೆಂಡ್ ಕರ್ಫ್ಯೂ ಉಲ್ಲಂಘನೆ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ವೀಕೆಂಡ್ ಕರ್ಫ್ಯೂ ನಡುವೆಯೂ ಬೆಳಗ್ಗಿನಿಂದ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವಿಲ್ಲದೆ ಅನಗತ್ಯವಾಗಿ ಜನರು ಓಡಾಡುತ್ತಿದ್ದು, ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ ಘಟನೆ ನಡೆದಿದೆ.

ಇನ್ನೂ ನಗರದ ಹಲವೆಡೆ ಮಟನ್, ಚಿಕನ್ ಸ್ಟಾಲ್ ತೆರೆದಿದ್ದು ಜನ್ರು ಮಾಂಸ ಖರೀದಿಗೆ ಮುಗಿಬಿದ್ದಿದ್ರು, ಅಲ್ಲಲ್ಲಿ ಕೋಳಿ ವ್ಯಾಪಾರ ಜೋರಾಗಿ ನಡೆದಿತ್ತು. ಇದರ ಜೊತೆಗೆ ಬಾರ್ಗಳ ಬಳಿ ಮದ್ಯ ಮಾರಾಟ ರಾಜಾರೋಷವಾಗಿ ನೆಡೆಯುತ್ತಿದ್ರು, ಕಣ್ಣುಮುಚ್ಚಿ ಕುಳಿತ ಅಬಕಾರಿ ಇಲಾಖೆ. ಟಿಫನ್ ಸೆಂಟರ್, ಹೋಟೆಲ್ಗಳಲ್ಲಿ ಪಾರ್ಸಲ್ ಬದಲು ಕುಳಿತಲ್ಲೇ ತಿಂಡಿತಿನಿಸುಗಳ ಸಪ್ಲೈ ಮಾಡಲಾಗ್ತಿತ್ತು.

ನಗರದ ಪೇಟೆ ಬೀದಿ ಮಾರುಕಟ್ಟೆಗಳಲ್ಲಿ ಕದ್ದು ಮುಚ್ಚಿ ಆಟೋಮೊಬೈಲ್ಸ್, ಬೇಕರಿ, ಚಪ್ಪಲಿ ಅಂಗಡಿ ಮಳಿಗೆ ಅರ್ಧ ಬಾಗಿಲು ತೆರೆದು ವ್ಯಾಪಾರ ಮಾಡಲಾಗ್ತಿದ್ದು, ಹೇಳೋರಿಲ್ಲ ಕೇಳೋರು ಇಲ್ಲದಂತಾಗಿದೆ. ಅಲ್ಲದೆ ಸರ್ಕಾರದ ಟಫ್ ರೂಲ್ಸ್ ನಿರ್ವಹಿಸಲು ಜನಸಾಮಾನ್ಯರಷ್ಟೇ ಅಲ್ಲ, ಕರ್ತವ್ಯ ನಿರ್ವಹಣೆ ಮಾಡುವಲ್ಲಿ ನೆಲಮಂಗಲ ತಾಲ್ಲೂಕು ಆಡಳಿತ, ನಗರಸಭೆ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದೆ ಅಂದ್ರೆ ತಪ್ಪಾಗಲಾರದು.

ಇದರ ನಡುವೆ ಮಾಧ್ಯಮಗಳು ವೀಕೆಂಡ್ ಟಫ್ ರೂಪ್ಸ್ ಬ್ರೇಕ್ ವರದಿ ಮಾಡಲು ಮುಂದಾಗ್ತಿದ್ದಂತೆ, ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕುದ್ರು ಅನ್ನೋ ಹಾಗೆ ನೆಲಮಂಗಲ ಟೌನ್ ಪೊಲೀಸ್ರು ರಸ್ತೆಗಿಳಿದು ರಸ್ತೆಗೆ ವಾಹನ ಅಡ್ಡಲಾಗಿ ಹಾಕಿ ಮಾಸ್ಕ್ ಹಾಕದವರ ಮೇಲೆ ಫೈನ್ ಹಾಕಿ ರೋಷಾವೇಶ ಮೆರೆದರು.

ಅಲ್ಲದೆ ತಮ್ಮ ಕಟ್ಟುನಿಟ್ಟಿನ ಕ್ರಮ ಹೇಗಿದೆ ಅಂತ ತೋರುವಂತಿತ್ತು. ಒಟ್ಟಾರೆ ಸರ್ಕಾರದ ಕರೋನಾ ಟಫ್ ರೂಲ್ಸ್ ಗಳನ್ನ ಜನ್ರು ಹೇಗೆ ಪಾಲಿಸ್ತಿದ್ದಾರಾ ಇಲ್ವ, ಉಲ್ಲಂಘಿಸಿದ್ರೆ ಅದನ್ನ ನಿರ್ವಹಿಸಬೇಕಾದ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಕೂಡ ವೀಕೆಂಡ್ ವಿಶ್ರಾಂತಿಗೆ ಮುಂದಾಗಿದೆ ಎನ್ನುವಂತಾಗಿದೆ.

Edited By : Manjunath H D
Kshetra Samachara

Kshetra Samachara

16/01/2022 03:04 pm

Cinque Terre

970

Cinque Terre

0

ಸಂಬಂಧಿತ ಸುದ್ದಿ