ಬೆಂಗಳೂರು: ನಿತ್ಯ ಜನಜಂಗುಳಿಯ ವ್ಯಾಪಾರಗಳಿಂದ ತುಂಬಿತುಳುಕುತ್ತಿದ್ದ ಕೆ.ಆರ್.ಮಾರುಕಟ್ಟೆ ಇಂದು ಬೆಳ್ಳಂಬೆಳಗ್ಗೆ ಬಿಕೋ ಎನ್ನುತ್ತಿದೆ.ಕೆ.ಆರ್.ಮಾರ್ಕೆಟ್ ಸುತ್ತಾಮುತ್ತಾ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಅಗತ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ.
ಅನಗತ್ಯವಾಗಿ ರಸ್ತೆಗಿಳಿದ,ವಿಕೇಂಡ್ ಕರ್ಪ್ಯೂ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಎಲ್ಲಾ ಡಿಸಿಪಿ ವಿಭಾಗಗಳಲ್ಲಿ ಸುಮಾರು 500 ಕ್ಕು ಹೆಚ್ಚು ಆಟೋ, ಬೈಕ್ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ನಗರದ ಪಶ್ಚಿಮ ವಿಭಾಗ ಒಂದರಲ್ಲೇ ಕಾರು, ಬೈಕ್, ಆಟೋ ಸೇರಿ 84 ವಿವಿಧ ರೀತಿಯ ವಾಹನ ಸೀಜ್ ಮಾಡಲಾಗಿದೆ. ಉತ್ತರ, ಆಗ್ನೇಯ , ಈಶಾನ್ಯ , ದಕ್ಷಿಣ, ಕೇಂದ್ರ ವೈಟ್ ಫೀಲ್ಡ್ ವಿಭಾಗಗಳಲ್ಲಿ ಒಟ್ಟು 300 ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ
ಸಿಟಿ ಮಾರ್ಕೆಟ್ನಲ್ಲಿ ಪೊಲೀಸರ ಹೊಸ ಪ್ಲಾನ್
ಸಿಟಿ ಮಾರ್ಕೆಟ್ ಕಡೆ ಸುಖಾ ಸುಮ್ಮನೆ ಓಡಾಡುವ ಮುನ್ನ ವಾಹನ ಸವಾರರು ಎಚ್ಚರ ವಹಿಸಬೇಕು. ಅನಗತ್ಯವಾಗಿ ಓಡಾಡುವ ಬೈಕ್ ಸೀಜ್ ಮಾಡುವ ಜೊತೆಗೆ ಕೋವಿಡ್ ಟೆಸ್ಟನ್ನು ಕಡ್ಡಾಯ ಮಾಡಿದ್ದಾರೆ. ಸುಖಾಸುಮ್ಮನೆ ಬರುವ ಜನರಿಗೆ ಕೋವಿಡ್ ಟೆಸ್ಟ್ ಮಾಡಿಸಿ ಬಿಬಿಎಂಪಿ ಸಿಬ್ಬಂದಿ ಕಳುಹಿಸುತ್ತಿದ್ದಾರೆ. ಇದೇ ಸಮಯದಲ್ಲಿಯೇ ಆಟೋ ಸೀಜ್ ಮಾಡಿದ ಪೊಲೀಸರು.ಇದರಲ್ಲಿ ಪ್ರಯಾಣ ಮಾಡುತ್ತಿದ್ದ 6 ಜನರಿಗೂ ಕೋವಿಡ್ ಟೆಸ್ಟ್ ಮಾಡಿಸಿ ಕಳಿಸಿದ್ದಾರೆ.
ಇನ್ನು ವೀಕ್ ಎಂಡ್ ಕರ್ಪ್ಯೂ ನಲ್ಲಿ ಮೆಟ್ರೋ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೂ ಪ್ರಯಾಣಿಕರು ಮಾತ್ರ ಮೆಟ್ರೋ ನಿಲ್ದಾಣಗಳತ್ತ ದಾವಿಸುತ್ತಿಲ್ಲ.
ಹತ್ತು ಹದಿನೈದು ಪರ್ಸೆಂಟ್ ಜನ ಇಲ್ಲಿಗೆ ಬಂದ್ರೆ ಹೆಚ್ಚು ಅಂತಿದ್ದಾರೆ ಮೆಟ್ರೋ ಸಿಬ್ಬಂದಿ. ಉಳಿದಂತೆ ನಗರದ ಬಹುತೇಕ ಮೆಟ್ರೋ ನಿಲ್ದಾಣ ಗಳು ಪ್ರಯಾಣಿಕರಿಲ್ದೆ ಖಾಲಿಯಾಗಿವೆ.
PublicNext
08/01/2022 09:54 am