ಬೆಂಗಳೂರು: ಎಲ್ಲ ಮಹಿಳೆಯರಿಗೂ ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಹಾಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಬ್ರೆಸ್ಟ್ ಕ್ಯಾನ್ಸರ್ ನ್ನು ತಡೆಗಟ್ಟೋದು ಹೇಗೆ, ಏನೆಲ್ಲ ಮುಂಜಾಗ್ರತಾ ಕ್ರಮ ವಹಿಸಬೇಕು ಎಂಬುದರ ಕುರಿತು ಚಿಕ್ಕದಾದ ವರದಿ ಇಲ್ಲಿದೆ ನೋಡಿ...
ಹೌದು... ಏನೇ ಆದ್ರು ಹೆಣ್ಣುಮಕ್ಕಳು ಯಾರಾತ್ರ ಆದ್ರು ಹೇಳಿಕೊಳ್ಳಬೇಕು ಅಂದ್ರೆ ಸಂಕೋಚ ಪಡ್ತಾರೆ. ಅಂತದ್ರಲ್ಲಿ ಬ್ರೆಸ್ಟ್ ಕ್ಯಾನ್ಸರ್ ಆಗಿದೆ ಅಂದ್ರೆ ಏನು ಅಂದುಕೊಳ್ತಾರೋ ಜನ ಅಂತ ಮುಚ್ಚಿಟ್ಟುಕೊಳ್ಳುವವರೇ ಜಾಸ್ತಿ.
ಆದ್ರೆ, ಅದರ ಅವಶ್ಯಕತೆ ಇಲ್ಲ, ಅದು ಬಹಳ ಅಪಾಯಕಾರಿ. ನಂತರ ಮಹಿಳೆಯರು ಎಲ್ಲಾದಕ್ಕೂ ಟೈಂ ಕೊಡ್ತಾರೆ. ಆದ್ರೆ, ಸ್ವತಃ ಅವರಿಗೇ ಅವರು ಟೈಂ ಕೊಡೋದಿಲ್ಲ! ಹೀಗೆ ನಾನಾ ವಿಧದ ಮಹಿಳೆಯರ ಕಷ್ಟಗಳ ಬಗ್ಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಅಭಿಯಾನ ನಡೆಯಿತು.
ಬ್ರೆಸ್ಟ್ ಕ್ಯಾನ್ಸರ್ ಬಂದ ಮಹಿಳೆಯರು ಗುಣಮುಖರಾಗಿ ಬೆಸ್ಟ್ ಸಪೋರ್ಟ್ ಗ್ರೂಪ್ ಲಾಂಚ್ ಮಾಡಿದ್ದಾರೆ.
ಯಾರಿಗಾದ್ರೂ ಸ್ತನಗಳಲ್ಲಿ ನೋವು ಬಂದಲ್ಲಿ ಅಥವಾ ಮಚ್ಚೆಗಳು ಕಾಣಿಸಿಕೊಂಡಲ್ಲಿ ನುರಿತ ವೈದ್ಯರನ್ನು ಭೇಟಿ ಮಾಡಿ. ನಿಮ್ಮಂಗೆ ಬಳಲಿದ ಪೇಶಂಟ್ ಗಳೇ ನಿಮಗೆ ಈ ಬಗ್ಗೆ ಮಾಹಿತಿ ಕೊಡ್ತಾರೆ.
ಇನ್ನು, ಮಹಿಳೆಯರೂ ಕೂಡ ನಿಮಗಾಗಿ ಟೈಂ ಪಡೆದುಕೊಳ್ಳಿ. ಯೋಗ, ಧ್ಯಾನ, ವಾಕಿಂಗ್ ಎಲ್ಲವನ್ನೂ ಏಕಾಗ್ರತೆಯಿಂದ ಮಾಡಿ. ಮನಸ್ಸಿದ್ರೆ ಮಾರ್ಗವಿದೆ. ನಮ್ಮ ಬುದ್ದಿ ಶಕ್ತಿ ಕರೆಕ್ಟಾಗಿದ್ರೆ ಏನು ಬೇಕಾದ್ರೂ ಮಾಡಬಹುದು ಎಂದು ಬಿಜೆಎಸ್ ನುರಿತ ವೈದ್ಯರು ಹೇಳಿದರು.
-ರಂಜಿತಾ ಸುನಿಲ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
02/10/2022 01:59 pm