ಬೆಂಗಳೂರು: ಹತ್ತು ವರ್ಷಗಳಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಗಂಭೀರ ಸ್ಥಿತಿಗೆ ತಲುಪಿದ್ದ ಮಹಿಳೆಯೊಬ್ಬರಿಗೆ ಯಶವಂತ ಪುರ ಮಣಿಪಾಲ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಗಿದೆ.
ಮಹಿಳೆಯೊಬ್ಬರು 10 ವರ್ಷದಿಂದ ಔಷಧಿ ಸೇವನೆಯಲ್ಲಿಯೇ ಹೃದಯವನ್ನು ಕಾಪಾಡಿಕೊಂಡು ಬಂದಿದ್ದರು. ಇನ್ನು ಮುಂದೆ ಔಷಧ ಸೇವನೆಯಿಂದ ಹೃದಯ ವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.
ಈ ಹಿನ್ನೆಲೆಯಲ್ಲಿ ಹೃದಯ ವೈಫಲ್ಯ ವಿಶೇಷ ತಜ್ಞ ಡಾ.ಕಾರ್ತಿಕ್ ವಾಸುದೇವ, ಹೃದಯ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಮೊಹಮ್ಮದ್ ರೆಹಾನ್ ಸಹೀದ್ ಮತ್ತಿತರ ತಜ್ಞ ವೈದ್ಯರ ನೇತೃತ್ವದಲ್ಲಿ ಹೃದಯ ಕಸಿ ಕೈಗೊಳ್ಳಲಾಗಿದೆ.ಯಶವಂತಪುರ ಮಣಿಪಾಲ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡಿದ ಮೊದಲ ಪ್ರಕರಣ ಇದಾಗಿದೆ.
PublicNext
05/04/2022 10:22 am