ಬೆಂಗಳೂರು : ಜಯದೇವ ಆಸ್ಪತ್ರೆ ಹಾಲಿ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ಅವರ ಅವಧಿಯನ್ನು 1 ವರ್ಷಕ್ಕೆ ವಿಸ್ತರಿಸಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಯದೇವ ಆಸ್ಪತ್ರೆಯ ಸಿಬ್ಬಂದಿಗಳು, ರೋಗಿಗಳ ಒತ್ತಾಯಕ್ಕೆ ಮಣಿದ ಸರ್ಕಾರ ಆಸ್ಪತ್ರೆ ನಿರ್ದೇಶಕರಾಗಿ ಡಾ.ಮಂಜುನಾಥ್ ಅವರನ್ನು ಒಂದು ವರ್ಷ ಸೇವಾವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ನಾಳೆ ನಿವೃತ್ತಿಯಾಗಬೇಕಾಗಿದ್ದ ಡಾ. ಮಂಜುನಾಥ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದಾರೆ.
PublicNext
18/07/2022 10:07 pm