ಸರಕಾರಿ ಆಸ್ಪತ್ರೆ ಎಂದರೆ ಉಚಿತವಾಗಿ ಚಿಕಿತ್ಸೆ ನೀಡಬೇಕು ಆದರೆ ಈ ಸರಕಾರಿ ಆಸ್ಪತ್ರೆಗೆ ನೀವೇನಾದರೂ ಹೋದರೆ ಕಾಸು ನೀಡಿದರೆ ಇಲ್ಲಿ ಟ್ರೀಟ್ಮೆಂಟ್ ಕೊಡುತ್ತಾರೆ. ಹೌದು ಇಲ್ಲಿನ ವೈದ್ಯನೊಬ್ಬ ಕಾಸು ಕೊಟ್ಟರೆ ಮಾತ್ರ ಚಿಕಿತ್ಸೆ ನೀಡಲು ಮುಂದಾಗುತ್ತಾನೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ನೀಡಿ ಚಿಕಿತ್ಸೆ ಪಡೆಯಲು ಬಡವರಿಂದ ಸಾಧ್ಯವಾಗದೆ ಸರಕಾರಿ ಆಸ್ಪತ್ರೆಗಳಿಗೆ ಬರುವ ಬಡವರಿಂದ ಇಲ್ಲೂ ದುಡ್ಡಿಗಾಗಿ ಬೇಡಿಕೆ ಇಡುತ್ತಿದ್ದಾನೆ ಈ ವೈದ್ಯ.
ಹೌದು ಈ ದೃಶ್ಯಗಳನ್ನು ಒಮ್ಮೆ ನೋಡಿ ವಾರ್ಡ್ನ ಬಾಗಿಲು ಹಾಕಿ ಎಷ್ಟಿದೆ ಎಂದು ಕೇಳುತ್ತಿರುವ ವೈದ್ಯರ ಹೆಸರು ಜೋಶಿ ದಾಸ್ ಜಯನಗರ ಜನರಲ್ ಹಾಸ್ಪಿಟಲ್ ನಲ್ಲಿ ಕೆಲಸ ಮಾಡುತ್ತಿರುವ ಡಾಕ್ಟರ್ ಇವರು. ಇದೇ ಜೋಶಿ ದಾಸ್ ಕಾಸು ಕೊಡಲಿಲ್ಲ ಅಂದರೆ ಚಿಕಿತ್ಸೆ ಮಾಡುವುದಿಲ್ಲ. ಸರ್ಕಾರ ತಿಂಗಳಾಗುತ್ತಿದ್ದಂತೆ ಲಕ್ಷ ಲಕ್ಷ ಸಂಬಳ ನೀಡಿದರೂ ಕೂಡ ಈ ಡಾಕ್ಟರ್ ಆಸ್ಪತ್ರೆಗೆ ಬರುವ ಬಡ ರೋಗಿಗಳಿಂದ ಕಾಸು ಪಡೆದು ಚಿಕಿತ್ಸೆ ನೀಡುತ್ತಾನೆ ಎಂದು ಆರೋಪ ಮಾಡುತ್ತಿದ್ದಾರೆ.
ಜಯನಗರ ಜನರಲ್ ಆಸ್ಪತ್ರೆಯಲ್ಲಿ ಡಾಕ್ಟರ್ ಜೋಶಿ ದಾಸ್ ಲಂಚಾವತಾರದ ಬಗ್ಗೆ ಸ್ಥಳೀಯ ಶಾಸಕಿಯಾದ ಸೌಮ್ಯ ರೆಡ್ಡಿ ಆರೋಗ್ಯ ಸಚಿವರಿಗೆ ಖುದ್ದಾಗಿ ಮಾಹಿತಿ ನೀಡಿದರು. ಮತ್ತು ಜಯನಗರ ಆಸ್ಪತ್ರೆಯಲ್ಲಿ ಯಾವ ರೀತಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಸಚಿವರಿಗೆ ಪತ್ರದ ಮೂಲಕ ಡಾಕ್ಟರ್ ನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರ ನೀಡಿದರು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
26/07/2022 08:38 pm