ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಸ್ಕ್ ಹಾಕದಿದ್ದರೆ ಬೀಳುತ್ತೆ ದಂಡ : ಬಿಬಿಎಂಪಿ‌ ಕಮಿಷನರ್ ಎಚ್ಚರಿಕೆ

ಬೆಂಗಳೂರು: ಕೋವಿಡ್ ಏರಿಕೆ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದೆ. ಆರೋಗ್ಯ ರಾಜ್ಯದಲ್ಲಿ ಕಳೆದ 10 ದಿನಗಳಿಂದ ನಿರಂತರವಾಗಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಳದ ಹಿನ್ನಲೆ ಕೋವಿಡ್ ಹೆಚ್ಚಾಗದಂತೆ ತಡೆಯಲು ಈ ಮಾರ್ಗ ಸೂಚಿಯನ್ನು ರೂಪಿಸಲಾಗಿದೆ.

ಮಾರ್ಷಲ್ಸ್ ಹಾಗು ಪೊಲೀಸ್ ಸಿಬ್ಬಂದಿ ಸಹಾಯದಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ ಬಸ್ ಅಲ್ಲಿ ಹೋಗುವಾಗ , ಗಾಡಿ ಓಡಿಸುವಾಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಪಾಲಿಕೆಯ ಮಾರ್ಷಲ್‌ಗಳು ಶಾಪಿಂಗ್ ಮಾಲ್ ಹೋಟೆಲ್ ಸೇರಿದಂತೆ ಇನ್ನೂ ಜನದಟ್ಟಣೆ ಇರುವ ಜಾಗಗಳಲ್ಲಿ ಗಸ್ತಿನಲ್ಲಿ ಹೋಡಾಡುತ್ತಿದ್ದಾರೆ.

2ಡೋಸ್ ವ್ಯಾಕ್ಸಿನ್ ಜೊತೆಗೆ ಪ್ರಿಕಾಷನರಿ ಡೋಸ್ ಪಡೆಯುವಂತೆ ಸೂಚನೆ ಇದೆ. ಕೋವಿಡ್ ಲಕ್ಷಣ ಇರುವವರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯಬೇಕು ನಿನ್ನೆ ಒಂದೇ ದಿನ 471 ಪ್ರಕರಣ ದಾಖಲಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇಕಡಾ 2.14ರಷ್ಟು ಹೆಚ್ಚಾಗಿದೆ. ಮತ್ತಷ್ಟು ಸೋಂಕಿತರ ಸಂಖ್ಯೆ ಏರಿಕೆ ಆಗದೇ ಇರಲು ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಂದೀಪ್ ಡಿ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

10/06/2022 10:35 pm

Cinque Terre

4.64 K

Cinque Terre

0

ಸಂಬಂಧಿತ ಸುದ್ದಿ