ದೇವನಹಳ್ಳಿ : ದೆಹಲಿಯಿಂದ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಬೆಂಗಳೂರಿನಲ್ಲಿ ಪತ್ತೆಯಾದ ಒಮ್ರಿಕಾನ್ ವೈರಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಮದ್ಯಾಹ್ನ ಈ ಬಗ್ಗೆ ಸಭೆ ಇದೆ, ಜಿನೋಮಿಕ್ ಸಿಕ್ವೇನ್ಸಿಂಗ್ ತಪಾಸಣೆ ನಡೆಸಿದ ನಂತರ ನಿನ್ನೆ ಸಂಜೆ ಇಬ್ಬರಿಗೂ ಒಮಿಕ್ರಾನ್ ಸೋಂಕು ಇರುವುದು ಧೃಢಪಟ್ಟಿದೆ ಎಂದಿದ್ದಾರೆ.
ಸೋಂಕಿತ ವ್ಯಕ್ತಿಯ ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕಿತರ ಪತ್ತೆ ಹಚ್ಚಲು ಸೂಚಿಸಲಾಗಿದೆ, ತಾಂತ್ರಿಕ ಸಲಹ ಸಮಿತಿ ತಜ್ಞರು ಏನು ಹೇಳ್ತಾರೆ ಅದರಂತೆ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಲಾಗುವುದು, ಒಮ್ರಿಕಾನ್ ವೈರಸ್ ನಿಯಂತ್ರಣಕ್ಕಾಗಿ ಬೇರೆ ಬೇರೆ ದೇಶದಲ್ಲಿ ಏನು ಪ್ರೋಟೋಕಾಲ್ ಇದೆ, ಯಾವ ರೀತಿ ನಿಭಾಯಿಸಬೇಕು, ಮೆಡಿಸನ್ ಪ್ರೊಟೊಕಾಲ್ ಬಿಹೇವಿಯರ್ ಪ್ರೋಟೋಕಾಲ್ ಬಗ್ಗೆ ಚರ್ಚೆ ಮಾಡಲಾಗುವುದು, ಕೇಸ್ ಹಿಸ್ಟರಿ ಜೊತೆ ಸಂಪೂರ್ಣ ಸಂಪರ್ಕಿತರ ಪತ್ತೆ ಮಾಡಲು ಸೂಚನೆ ನೀಡಲಾಗಿದೆ ಎಂದರು .
Kshetra Samachara
03/12/2021 01:37 pm