ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಷ್ಟದಲ್ಲೇ BMTC ಮುಂದುವರಿಕೆ

ಶಾಂತಿನಗರ: ಕೊರೊನಾ ಬಳಿಕ ಬಹುತೇಕ ವಾಣಿಜ್ಯ ವಹಿವಾಟು ಯಥಾಸ್ಥಿತಿಗೆ ಬಂದರೂ BMTCಗೆ ನಿರೀಕ್ಷಿತ ಆದಾಯದ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಪೂರ್ಣ ಪ್ರಮಾಣದ ಪ್ರಯಾಣಿಕರು ಬಾರದೆ ನಷ್ಟದಲ್ಲೇ ಮುಂದುವರಿಯುವಂತಾಗಿದೆ.

ಕೊವಿಡ್‌ ಪೂರ್ವದಲ್ಲಿ ನಗರದಲ್ಲಿ 6,150 ಬಸ್‌ಗಳು ಸಂಚರಿಸುತ್ತಿದ್ದವು. ನಿತ್ಯ 33.10 ಲಕ್ಷ ಮಂದಿ ಪ್ರಯಾಣಿಕರು ಸಂಚರಿಸುತ್ತಿದ್ದರು. ಪ್ರತಿದಿನ 4.94 ಕೋಟಿ ಆದಾಯ ಬರುತ್ತಿತ್ತು. ಕೊವಿಡ್‌ ನಂತರ ಈ ಆದಾಯ 1.14 ಕೋಟಿ ರೂ. ನಷ್ಟು ಕಡಿಮೆಯಾಗಿದೆ.

ಈ ಆದಾಯ ಖೋತಾದ ಬಹುತೇಕ ಪಾಲು ವೋಲ್ವೋ ಬಸ್‌ಗಳದ್ದಾಗಿದೆ ಎಂದು BMTC ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕೊವಿಡ್‌ ಭೀತಿಯಿಂದ ಸ್ವಂತ ವಾಹನಗಳನ್ನು ಅವಲಂಬಿಸಿದ ಬಹುತೇಕರು BMTC ಬಸ್‌ಗಳತ್ತ ಮರಳಿಲ್ಲ. ಕೆಲವರು ಮೆಟ್ರೋ ರೈಲು ಪ್ರಯಾಣದತ್ತ ಆಕರ್ಷಿತರಾಗಿರುವುದರಿಂದ BMTCಗೆ ಹೊಡೆತ ನೀಡಿದೆ.

Edited By : Abhishek Kamoji
Kshetra Samachara

Kshetra Samachara

26/09/2022 05:53 pm

Cinque Terre

3.04 K

Cinque Terre

0

ಸಂಬಂಧಿತ ಸುದ್ದಿ