ಆನೇಕಲ್: ಆನೇಕಲ್ ತಾಲೂಕಿನ ಕರ್ಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಾಳ್ದೇನ್ಹಳ್ಳಿ ಕೆರೆ ಬಳಿ ಲೀಕೇಜ್ ಸಂಬಂಧಸಿದಂತೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಅಧಿಕಾರಿಗಳು ಜತೆಗೂಡಿ ಸ್ಥಳ ಭೇಟಿ ಮಾಡಿ ಪರೀಶೀಲನೆ ಮಾಡಿದ್ದಾರೆ.
ಇನ್ನು ಕೆರೆ ಪರಿಶೀಲನೆ ಮಾಡಿ ಮಾತನಾಡಿದ ಕಾರ್ಯನಿರ್ವಣಾಧಿಕಾರಿ ಲಕ್ಷ್ಮಿನಾರಾಯಣಸ್ವಾಮಿ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತಾತ್ಕಾಲಿಕ ಅಲ್ಲದೆ ಶಾಶ್ವತವಾಗಿ ಪರಿಹಾರ ನೀಡಲು ಸರ್ಕಾರದಿಂದ ಮತ್ತು ಎನ್‌ಜಿಓ ಕಂಪನಿಯಿಂದ ಅಭಿವೃದ್ಧಿಪಡಿಸಲು ಎಲ್ಲಾ ರೀತಿಯ ಸೂಚನೆಯನ್ನು ನೀಡಿದ್ದೇನೆ ಎಂದು ತಿಳಿಸಿದರು. ಇನ್ನು ಪಿಡಿಒ ಅಧಿಕಾರಿ ಬಸವರಾಜ್ ಮಾತನಾಡಿ ಕೆರೆ ಅಭಿವೃದ್ಧಿಪಡಿಸಲು ಯೋಜನೆ ಮತ್ತು ಅದಕ್ಕೆ ಖರ್ಚಾಗುವ ದುಂಡು ವೆಚ್ಚವನ್ನು ಡಿಪಿಆರ್ ರನ್ನ ಕೇಳಿದ್ದಾರೆ. ಆದಷ್ಟು ಬೇಗ ಕೆಲಸ ಪ್ರಾರಂಭ ಮಾಡುವುದಾಗಿ ತಿಳಿಸಿದರು.
Kshetra Samachara
03/09/2022 10:47 pm