ಬೆಂಗಳೂರು: ರಾಜಧಾನಿಯಲ್ಲಿ ಪ್ರತೀ ವಾರ್ಡ್ ಗೆ ಒಂದೇ ಗಣೇಶ ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪಿಸಲು ಅವಕಾಶ ನೀಡಿರುವ ಬಿಬಿಎಂಪಿಯ ವಿವಾದಿತ ಸೂಚನೆ ಈ ಕೂಡಲೇ ವಾಪಸ್ಸು ಪಡೆಯಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರಿಗೆ ಪತ್ರದ ಮೂಲದ ಒತ್ತಾಯಿಸಿರುವ ಎನ್.ಆರ್.ರಮೇಶ್ ಪ್ರತೀ ವಾರ್ಡ್ ಗೆ ಕೇವಲ ಒಂದು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಮಾತ್ರ ಅವಕಾಶ ನೀಡಲಾಗಿರುವ ಸೂಚನೆ ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.
ಕಳೆದರೆಡು ವಾರ್ಷಿಕ ಸಾಲಿನಲ್ಲಿ ಕೋವಿಡ್ 19 ಮೊದಲನೇ ಅಲೆ ಮತ್ತು ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದ ಕಾರಣ ವಾರ್ಡಿಗೆ 1 ಗಣೇಶ ಮೂರ್ತಿಯನ್ನು ಕೂರಿಸಲು ಅವಕಾಶ ನೀಡಿ, ಆದೇಶವನ್ನು ಹೊರಡಿಸಲಾಗಿತ್ತು .ಆದರೆ, ಅದು ಆಗಿನ ಪರಿಸ್ಥಿತಿಗೆ ಸಮಂಜಸವಾಗಿತ್ತು ಎಂದು ಹೇಳಿದ್ದಾರೆ.
ಪ್ರಸ್ತುತ ಕೋವಿಡ್ 19 ಆತಂಕ ಇಲ್ಲ:
ಪ್ರಸ್ತುತ ಕೋವಿಡ್ 19 ಸಂಬಂಧಿಸಿದ ಯಾವುದೇ ಆತಂಕದ ಪರಿಸ್ಥಿತಿ ಇಲ್ಲದೆ ಇರುವ ಕಾರಣ ಹಾಗೂ ರಾಜ್ಯದ ಎಲ್ಲಾ ಭಾಗಗಳಲ್ಲಿ ಲಕ್ಷಾಂತರ ಮಂದಿ ಸೇರುವ ರಾಜಕೀಯ ಕಾರ್ಯಕ್ರಮಗಳಿಗೆ, ಜಾತ್ರಾ ಮಹೋತ್ಸವಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮತ್ತು ಕ್ರೀಡಾಕೂಟಗಳಿಗೆ ಮುಕ್ತ ಅವಕಾಶ ನೀಡಿರುವ, ನೀಡುತ್ತಿರುವುದು ಸಾಮಾನ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಾರ್ಡಿಗೆ ಒಂದೇ ಗಣೇಶ ಸೂಕ್ತವಲ್ಲ:
ನಮ್ಮ ಮುಂದೆ ಇದ್ದರೂ ಸಹ ತಾವು ಪ್ರಸ್ತುತ ವರ್ಷ ವಾರ್ಡಿಗೆ ಒಂದೇ ಗಣೇಶ ಮೂರ್ತಿಯನ್ನು ಕೂರಿಸಬೇಕೆಂಬ ಆದೇಶವನ್ನು ಹೊರಡಿಸಲು ಹೊರಟಿರುವುದು ಸೂಕ್ತವಾದುದಲ್ಲ ಎಂದು ಅಭಿಪ್ರಾಪಟ್ಟಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ:
ಹಿಂದೂಗಳ ಆರಾಧ್ಯ ದೈವವಾದ ಗಣೇಶ ಹಬ್ಬವನ್ನು ಕೇವಲ ಬೆಂಗಳೂರು ಮಹಾನಗರದಲ್ಲಿ ಮಾತ್ರವೇ ಸಾವಿರಾರು ಸಂಘ, ಸಂಸ್ಥೆಗಳು ನಿರಂತರವಾಗಿ ಆಚರಿಸಿಕೊಂಡು ಬಂದಿವೆ. ಪಾಲಿಕೆಯ ನಿಲುವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ವಿಷಯವಾಗಿದೆ
ಬಹಿರಂಗ ಹೋರಾಟದ ಎಚ್ಚರಿಕೆ :
ಪಾಲಿಕೆ ಮುಖ್ಯ ಆಯುಕ್ತರು ಸಹ ತಮ್ಮ ಈ ವಿವಾದಾತ್ಮಕ ಸೂಚನೆಯನ್ನು ಕೂಡಲೇ ಹಿಂಪಡೆದುಕೊಂಡು 2020 ಕ್ಕೂ ಮೊದಲು ಇದ್ದಂತೆ ಗಣೇಶನ ಭಕ್ತರು ಇಷ್ಟಪಟ್ಟ ಹಾಗೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿಕೊಂಡು ವಿಸರ್ಜನೆ ಮಾಡಲು ಅವಕಾಶ ನೀಡಬೇಕು. ನಿಲುವಿಗೆ ಬದ್ಧರಾಗಿಯೇ ಇದ್ದರೆ, ತಮ್ಮ ಆದೇಶದ ವಿರುದ್ಧ ಬಹಿರಂಗ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Kshetra Samachara
08/08/2022 02:52 pm