ಹೊಸಕೋಟೆ:ಭಾರತ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಚರಣೆ ನಡೆಸುತ್ತಿದೆ. ನಮಗೆ ಸ್ವಾತಂತ್ರ್ಯ ದೊರೆತು 75 ವರ್ಷದ ಸವಿನೆನಪಿಗಾಗಿ ಸ್ವಾತಂತ್ರ್ಯದ ವೇಳೆ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ, ಗೌರವ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಇದರ ಅಂಗವಾಗಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿ, ತಹಶೀಲ್ದಾರರ ಮೂಲಕ ಆದೇಶ ಪಾಲನೆಗೆ ಮುಂದಾಗಿ ಪೂರ್ವಸಿದ್ಧತೆ ಹಾಗೂ ಸಭೆಗಳನ್ನು ಹಮ್ಮಿಕೊಂಡಿದೆ.
ಇಂದು ಹೊಸಕೋಟೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶಾಸಕ ಶರತ್ ಬಚ್ಚೇಗೌಡರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ಮಹೇಶ್ ಕುಮಾರ್ ಹಾಗೂ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾವಹಿಸಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೆಲಸ ಕಾರ್ಯಗಳ ಜವಾಬ್ದಾರಿವಹಿಸಿ ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆಯ ಸಮಗ್ರ ಚರ್ಚೆ ನಡೆಯಿತು. ಸಭೆಯ ನಂತರ ಮಾತನಾಡಿದ ಹೊಸಕೋಟೆ ತಹಶೀಲ್ದಾರರು ಸರ್ಕಾರಿ ಕಚೇರಿ, ಪ್ರತಿ ಮನೆ,ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ ದೇಶಪ್ರೇಮ ಮೆರೆಯಬೇಕು ಎಂದು ಹೊಸಕೋಟೆ ಜನತೆಗೆ ಕರೆ ನೀಡಿದರು.
PublicNext
05/08/2022 09:41 pm