ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಮೀಸಲಿಟ್ಟ ಜಾಗ 'ರಾಷ್ಟ್ರೋತ್ಥಾನ'ಕ್ಕೆ ನೀಡಲು ಸರ್ಕಾರ ಹುನ್ನಾರ"

ವರದಿ: ಗೀತಾಂಜಲಿ

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೆಸರಿನಲ್ಲಿರುವ 5 ಎಕರೆ ಜಮೀನನ್ನು ಹಿಂದೂ ರಾಷ್ಟ್ರೋತ್ಥಾನ ಪರಿಷತ್‌ಗೆ ಬಿಜೆಪಿ ಸರ್ಕಾರ ಮಂಜೂರು ಮಾಡಲು ಹೊರಟಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್‌ ಇಂಡಿಯಾ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯವನ್ನು ಸಂಘ ಪರಿವಾರದ ಕೈಗೆ ಕೊಡಲು ರಾಜ್ಯ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಶಿಕ್ಷಣಕ್ಕಾಗಿ ಮೀಸಲಿಟ್ಟ ಜಮೀನನ್ನು ಆರೆಸ್ಸೆಸ್‌ನ ಅಂಗ ಸಂಸ್ಥೆಗಳಿಗೆ ಮಂಜೂರು ಮಾಡಲು ಹೊರಟಿರುವುದು ರಾಜ್ಯದ ಜನತೆಗೆ ಮಾಡಿರುವ ದ್ರೋಹವಾಗಿದೆ.

ಸದಾ ದೊಂಬಿ, ಗಲಾಟೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬಿಜೆಪಿಯ ಮಾತೃಸಂಸ್ಥೆ ಸಂಘ ಪರಿವಾರಕ್ಕೆ ಮಂಜೂರು ಮಾಡಲು ಹೊರಡುವ ಮೂಲಕ ಸರ್ಕಾರಿ ಪ್ರಾಯೋಜಿತವಾಗಿ ರಾಜ್ಯದ ಶಾಂತಿ ನೆಮ್ಮದಿಗೆ ಭಂಗವುಂಟು ಮಾಡಲು ಹೊರಟಿದೆ. ಸಚಿವ ಸಂಪುಟಕ್ಕೆ ಸಂಘ ಪರಿವಾರದ ಮೇಲೆ ಪ್ರೇಮ ಅಷ್ಟೊಂದಿದ್ದರೆ ಮುಖ್ಯಮಂತ್ರಿ ಮತ್ತು ಸಚಿವರ ಸೊತ್ತಿನಿಂದ ಸಂಘ ಪರಿವಾರದ ಕಚೇರಿ ನಿರ್ಮಾಣಕ್ಕೆ ಜಮೀನು ನೀಡಲಿ, ಹೊರತು ರಾಜ್ಯದ ಸರ್ಕಾರಿ ಸೊತ್ತಿನಿಂದಲ್ಲ ಎಂದು ಹರಿಹಾಯ್ದಿದೆ.

ಅಲ್ಪಸಂಖ್ಯಾತರ ಅಭಿವೃದ್ಧಿ ವಿಚಾರದಲ್ಲಿ ಸದಾ ಅಸಡ್ಡೆ ಧೋರಣೆ ತಾಳುವ ಬೊಮ್ಮಾಯಿ ಸರ್ಕಾರ, ಇದೀಗ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇದ್ದ ಹಲವಾರು ಯೋಜನೆಗಳನ್ನು ನಿಲ್ಲಿಸಿ, ಮತ್ತೆ ಅಲ್ಪಸಂಖ್ಯಾತರಿಗೆ ಮೀಸಲಾಗಿರುವ ಭೂಮಿಯನ್ನೇ ಅಲ್ಪಸಂಖ್ಯಾತರ ವಿರುದ್ಧ ಸದಾ ದ್ವೇಷ ಕಾರುವ ಸಂಘ ಪರಿವಾರದ ಅಂಗಸಂಸ್ಥೆಯಾದ ಹಿಂದೂ ರಾಷ್ಟ್ರೋತ್ಥಾನ ಪರಿಷತ್‌ಗೆ ನೀಡಲು ಹೊರಟಿರುವುದು ಅಲ್ಪಸಂಖ್ಯಾತರ ಮೇಲೆ ಸರ್ಕಾರ ಮಾಡುತ್ತಿರುವ ದಬ್ಬಾಳಿಕೆ ಎಂದು ಕ್ಯಾಂಪಸ್ ಫ್ರಂಟ್ ಕಿಡಿಕಾರಿದೆ.

Edited By : Shivu K
Kshetra Samachara

Kshetra Samachara

01/08/2022 09:06 pm

Cinque Terre

5.15 K

Cinque Terre

0

ಸಂಬಂಧಿತ ಸುದ್ದಿ