ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜಧಾನಿಯಲ್ಲಿ ಮಂಕಿ ಪಾಕ್ಸ್ ಪ್ರಕರಣ ಇಲ್ಲ, ಆದರೂ ಮುಂಜಾಗ್ರತೆ; ತುಷಾರ್ ಗಿರಿನಾಥ್

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಂಕಿ ಪಾಕ್ಸ್ ಪ್ರಕರಣ ವರದಿಯಾಗಿಲ್ಲ. ಆದರೂ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತುಷಾರ್ ಗಿರಿನಾಥ್, ನಗರದಲ್ಲಿ ಮಂಕಿ ಪಾಕ್ಸ್ ಯಾವುದೇ ಪ್ರಕರಣ ದಾಖಲಾಗಿಲ್ಲ. ಪ್ರಕರಣ ದಾಖಲಾದರೆ ಚಿಕಿತ್ಸೆ ಕುರಿತಂತೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರ್ಕಾರ ಸೂಚನೆ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು‌.

* ವಾರ್ಡ್ ಗಳ ಬಜೆಟ್ ಆಯವ್ಯಯ ಪರಿಷ್ಕರಣೆ: ಚುನಾವಣೆ ಸಂಬಂಧ 1993ರಿಂದ ಈಚೆಗೆ ಗೆದ್ದ ಅಭ್ಯರ್ಥಿಗಳ ಹಾಗೂ ಮೀಸಲಾತಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ವಾರ್ಡ್ ಮರುವಿಂಗಡಣೆ ಈಗಾಗಲೇ ಪೂರ್ಣಗೊಂಡಿದ್ದು, ವಾರ್ಡ್ ಗಳಿಗೆ ಬಜೆಟ್ ಆಯವ್ಯಯ ಪರಿಷ್ಕರಣೆ ಮಾಡಲಾಗುವುದು ಎಂದು ಈ ಸಂದರ್ಭ ತಿಳಿಸಿದರು.

* ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವನೆ: ಪ್ರತಿ ವಾರ್ಡ್ ಗೆ ಎರಡೂವರೆ ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ವಾರ್ಡ್ ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಸೂಚಿಸಿದ್ದು, ವಾರ್ಡ್ ನಕಾಶೆ ಆಧಾರದ ಮೇಲೆ ವಾರ್ಡ್ ಕಚೇರಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ವಾರ್ಡ್ ಗಳ ಸಂಖ್ಯೆ ಏರಿಕೆ‌ ವಿಚಾರ 400 ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದು ವಿವರಿಸಿದರು.

*‌ ಅನಧಿಕೃತ ಫ್ಲೆಕ್ಸ್ ಹಾಕುವವರ ವಿರುದ್ಧ ಕ್ರಮ: ಅನಧಿಕೃತ ಫ್ಲೆಕ್ಸ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ, ಪ್ರತಿದಿನ ಸಾವಿರಾರು ಫ್ಲೆಕ್ಸ್ ಗಳನ್ನು ತೆರವು ಮಾಡಲಾಗುತ್ತಿದೆ. ಇನ್ನೂ, ತಪ್ಪು ಮಾಡುವವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ ಎಂದರು.

*ಅನಧಿಕೃತ ಪ್ಲಾಸ್ಟಿಕ್ ತಯಾರಿಕೆ ಘಟಕಗಳ ಮೇಲೆ ದಾಳಿ: ಪ್ಲಾಸ್ಟಿಕ್ ನಿಷೇಧ ಕುರಿತು ಮಾತನಾಡಿದ ಗಿರಿನಾಥ್, ಸಾಕಷ್ಟು ಪ್ಲಾಸ್ಟಿಕ್ ಜಪ್ತಿ ಮಾಡಿದ್ದೇವೆ. ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಆಗಿದೆ‌‌. ಆಗಾಗ ದಾಳಿ ಮಾಡುವ ಕೆಲಸ ಮುಂದುವರೆಸಲಾಗುವುದು ಎಂದ ಹೇಳಿದರು.

Edited By : Shivu K
Kshetra Samachara

Kshetra Samachara

21/07/2022 09:08 am

Cinque Terre

4.52 K

Cinque Terre

0

ಸಂಬಂಧಿತ ಸುದ್ದಿ