ಬೆಂಗಳೂರು- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೋಮವಾರ 243 ವಾರ್ಡ್ ಗಳಿಗೆ ಏರಿಕೆಯಾಗಿರುವ ವಾರ್ಡ್ ಗಳ ಪುನರ್ ವಿಂಗಡಣೆ ಪಟ್ಟಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದೆ. ಈ ಮೂಲಕ ಬಿಬಿಎಂಪಿ ಚುನಾವಣೆ ಸಿದ್ಧತೆ ಮತ್ತಷ್ಟು ಚುರುಕುಗೊಂಡಂತಾಗಿದೆ.
ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲು ಪಟ್ಟಿಯನ್ನು 8 ವಾರದೊಳಗೆ ಅಂತಿಮಗೊಳಿಸಿ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಆರಂಭಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸಲ್ಲಿಸಿದ ವಾರ್ಡ್ ಪುನರ್ ವಿಂಗಡಣೆ ವರದಿ ಪ್ರಾಮುಖ್ಯತೆ ಪಡೆದಿದೆ.
198 ವಾರ್ಡ್ ಗಳಿಗೆ ವಿಸ್ತಾರಗೊಂಡಿದ್ದ ಬಿಬಿಎಂಪಿ ವಾರ್ಡ್ ಗಳ ಸಂಖ್ಯೆ ೨೪೩ಕ್ಕೆ ಏರಿಸಲು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಪಾಲಿಕೆ ಐದು ಕ್ಷೇತ್ರಗಳ ವಾರ್ಡ್ ತಿದ್ದುಪಡಿ ಮಾಡಿ ಸರ್ಕಾರ ಸಲ್ಲಿಕೆ ಮಾಡಿದೆ. ಆ ಪ್ರಕಾರ ಮಲ್ಲೇಶ್ವರಂ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಲೇಔಟ್, ಪುಲಕೇಶಿಯ ನಗರ, ಸಿ.ವಿ. ರಾಮ ನ್ ನಗರ, ವಾರ್ಡ್ ವಿಂಗಡಣೆ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 85 ಲಕ್ಷ ಮತದಾರರನ್ನು ಗುರುತು ಮಾಡಲಾಗಿದ್ದು, ಒಂದು ವಾರ್ಡ್ ಗೆ ಸರಾಸರಿ 35 ಸಾವಿರ ಜನ ಸಂಖ್ಯೆ ಆಧಾರದ ಮೇರೆಗೆ ವಾರ್ಡ್ ವಿಂಗಡಣೆ ಮಾಡಲಾಗಿದ್ದು, 2011ರ ಜನಗಣತಿ ಪ್ರಕಾರ ವಾರ್ಡ್ ಪುನರ್ ವಿಂಗಡಣೆ ಮಾಡಲಾಗಿದೆ.
Kshetra Samachara
06/06/2022 10:17 pm