ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ಕವಿತೆ' ಮತ್ತು 'ಹೀಗೊಂದು ಟಾಪ್ ಪ್ರಯಾಣ' ಕೈಬಿಡಲು ಸಾಹಿತಿಗಳಾದ ಮೂಡ್ನಾಕೂಡು, ಕಂಬಳಿ ಸರ್ಕಾರಕ್ಕೆ ಮನವಿ

ಬೆಂಗಳೂರು- ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಹೋರಾಟ ಮತ್ತಷ್ಟು ತೀವ್ರ ಗೊಳ್ಳುತ್ತಿದ್ದು, ದಿನಕ್ಕೊಬ್ಬ ಸಾಹಿತಿ ಸರ್ಕಾರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಇದರ ಸಾಲಿಗೆ ಮೂಡ್ನಾಕೂಡು ಚಿನ್ನಸ್ವಾಮಿಯವರು 5ನೇ ತರಗತಿ ಪಠ್ಯದಲ್ಲಿದ್ದ ತಮ್ಮ ಪದ್ಯಕ್ಕೆ ನೀಡಿದ್ದ ಅನುಮತಿ ವಾಪಸ್ ಪಡೆದಿದ್ದಾರೆ.

ಈ ಸಂಬಂಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರವರಿಗೆ ನನ್ನ ಕವಿತೆಗೆ ಅಲ್ಲಮನ ಮೆದುಳು ಬಸವಣ್ಣನ ಹೃದಯವಿರಲಿ. ನನ್ನ ಕವಿತೆಗೆ ಬುದ್ಧನ ಸ್ವಾಸ್ಥ್ಯ ಆನಂದದ ಸ್ನೇಹವಿರಲಿ ಎಂಬ ಪದ್ಯ ಬರೆದಿದ್ದ ಮೂಡ್ನಾಕೂಡು ಚಿನ್ನಸ್ವಾಮಿ ಅವರು ನನ್ನ ಕವಿತೆ ಎಂಬ ಪದ್ಯವನ್ನ ಕೈಬಿಡಿ ಎಂದು ಪತ್ರ ಬರೆದಿದ್ದಾರೆ.

ಶಾಲಾ ಪಠ್ಯ ಕೇಸರೀಕರಣ ಗೊಳ್ಳು ತ್ತಿದೆ. ಇದರಿಂದ ಸಾರಸ್ವತ ಲೋಕ ವಿಚಲಿತಗೊಂಡಿದೆ ಅಂತಾ ಆತಂಕ ಹೊರ ಹಾಕಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಮಿತಿಯನ್ನು ನೇಮಿಸಿ ಶಾಲಾ ಪಠ್ಯಗಳನ್ನು ಕೇಸರಿಕರಣಗೊಳಿಸುತ್ತಿರುವ ಬಗ್ಗೆ ಕನ್ನಡ ಸಾರಸ್ವತ ಲೋಕ ವಿಚಲಿತ.

ಬಸವಣ್ಣನವರ ಕುರಿತು ತಪ್ಪು ಮಾಹಿತಿ ನೀಡುವುದು, ಕುವೆಂಪು ಅವರನ್ನ ಅವಮಾನಿಸುವುದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಾಡುವ ಅಪಚಾರ. ಜಾತಿ ವ್ಯವಸ್ಥೆಯಿಂದ ಕಲುಷಿತಗೊಂಡಿರುವ ನಮ್ಮ ಸಮಾಜವನ್ನ ಜಾತ್ಯಾತೀತಗೊಳಿಸಿದ್ರೆ ಮಾತ್ರ ಸರಿಪಡಿಸಲು ಸಾಧ್ಯ. ಸ್ವಾಸ್ಥ್ಯ ಸಮಾಜಕ್ಕಾಗಿ ಮುಂದಿನ ಪೀಳಿಗೆಯನ್ನು ತಯಾರು ಮಾಡುವ ಶಿಕ್ಷಣಕ್ಷೇತ್ರ ಅನವಶ್ಯಕ ವಿದ್ಯಮಾನ ಗಳಿಂದ ದಾಳಿಗೊಳ ಗಾಗುತ್ತಿ ರುವುದು ವಿಷಾದನೀಯ.

ಪತ್ರಪ್ರಗತಿಪರತೆಯ ಪ್ರತಿಪಾದಿಸು ವವರನ್ನು ಎಡಪಂಥೀಯರು ಎಂದು ದೂರುವುದು ಹಾಗೂ ದೂರ ಮಾಡುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಈ ಹಿನ್ನೆಲೆಯಲ್ಲಿ 5ನೇ ತರಗತಿಗೆ ಪಠ್ಯವಾಗಿರುವ ನನ್ನ ಕವಿತೆಗೆ ಎಂಬ ಕವಿತೆಗಾಗಿ ನೀಡಿರುವ ನನ್ನ ಅನುಮತಿಯನ್ನ ಹಿಂಪಡೆಯುತ್ತಿದ್ದೇನೆ ಅಂತಾ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

31/05/2022 08:07 pm

Cinque Terre

754

Cinque Terre

0

ಸಂಬಂಧಿತ ಸುದ್ದಿ