ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಬಿಎಂಪಿ ‌ಚೀಫ್ ಕಮಿಷನರ್ ನಡೆಗೆ ಬೆಂಗಳೂರಿನ ಜನ್ರು ಗರಂ

ಬೆಂಗಳೂರು- ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರಿಗೆ ನೆಟ್ಟಿಗರು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಇಂದು HAL 2ನೇ ಹಂತದ ಹೊಯ್ಸಳ ನಗರ ವಾರ್ಡ್ ವ್ಯಾಪ್ತಿಯ ಡಾ. ಎಸ್.ಕೆ. ಕರೀಂ ಖಾನ್ ರಸ್ತೆ ಪ್ರದೇಶದ ಪಾದಚಾರಿ ಮಾರ್ಗ, ಚರಂಡಿ ಸಮಸ್ಯೆಗಳನ್ನು ಅನಿರೀಕ್ಷಿತವಾಗಿ ಪರಿವೀಕ್ಷಣೆಯನ್ನು ಚೀಫ್ ಕಮಿಷನರ್ ಮಾಡಿದರು.

ಏನಕ್ಕೆ ಅಂದ್ರೆ ಅಲ್ಲಿನ ಪುಟ್ ಪಾತ್ ಸಮಸ್ಯೆ ಗಮನಕ್ಕೆ ತಂದ ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯ ದರ್ಶಿ ಡಾ. ಎ. ರವೀಂದ್ರ ಅವರ ಸಲುವಾಗಿ ತುಷಾರ್ ಗಿರಿನಾಥ್ ರವರು ಸ್ಥಳ ಪರಿಶೀಲನೆ ಮಾಡಿದರು.ಈ ಬಗ್ಗೆ ಟ್ವೀಟರ್ ನಲ್ಲಿ ಹಾಕಿರುವ ತುಷಾರ್ ಗಿರಿನಾಥ್ ರವರು ಕರ್ನಾ ಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯ ದರ್ಶಿ ಡಾ. ಎ. ರವೀಂದ್ರ ರವರಿಗೆ ಸಮಯೋಚಿತ ಮಾರ್ಗ ದರ್ಶನಕ್ಕೆ ಧನ್ಯವಾದಗಳು ಸಲ್ಲಿಸಿದ್ದಾರೆ.

ಇದಕ್ಕೆ ಅಸಮಾಧಾನ ಹೊರಹಾಕಿದ ಬೆಂಗಳೂರು ‌ಜನರು ಸಾಮಾನ್ಯ ವ್ಯಕ್ತಿ ನೀಡಿರುವ ಸಮಸ್ಯೆಗಳನ್ನು ನೀವೂ ಆಲಿಸಬೇಕು.‌ಸರ್ಕಾರಕ್ಕೆ ತೆರಿಗೆ ಕಟ್ಟುವವರು ಕಾಮನ್ ಮ್ಯಾನ್.‌ಕೇವಲ ನಿವೃತ್ತ ಅಧಿಕಾರಿ ಗಳು ಸಲಹೆ ಪರಿಗಣಿಸೋದು ನಿಮ್ಮ ಕೆಲಸ ಅಲ್ಲ. ಕಳೆದ ಐದು ವರ್ಷಗಳಿಂದ ಟ್ವಿಟರ್ ನಲ್ಲಿ ಬಿಬಿಎಂಪಿ ಸಂಬಂಧಿಸಿದ ಸಮಸ್ಯೆ ಗಳ ಹಾಕಿರೋದನ್ನು ನೋಡಿ ಪರಿಹರಿಸಿ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

21/05/2022 10:57 pm

Cinque Terre

4.25 K

Cinque Terre

0

ಸಂಬಂಧಿತ ಸುದ್ದಿ