ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇನ್ಮುಂದೆ ದಿನದ 24 ಗಂಟೆಯೂ ಹೋಟೆಲ್ಗಳು ತೆರೆಯಲಿವೆ. ಇಡೀ ರಾತ್ರಿ ಹೊತ್ತು ಊಟ-ತಿಂಡಿ ಸಿಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, 24/7 ಎಲ್ಲ ಹೋಟೆಲ್, ಬೇಕರಿ, ಸ್ವೀಟ್ಸ್ ಸ್ಟಾಲ್, ಐಸ್ಕ್ರಿಂ ಶಾಪ್ ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರಿನಲ್ಲಿ ಹಗಲು-ರಾತ್ರಿ ಎಂಬ ವ್ಯತ್ಯಾಸವಿರದೇ ದುಡಿಯುವ ಮಂದಿ ತುಂಬಾ ಇದ್ದಾರೆ. ಆದರೆ ರಾತ್ರಿ 11 ಗಂಟೆಯಾದರೆ ಊಟ ಸಿಗುವುದು ಕಷ್ಟವಾಗಿದೆ. ರಾತ್ರಿ ವೇಳೆ ಹೋಟೆಲ್ಗಳು ತೆರೆಯಲು ಅವಕಾಶವೇ ಇರಲಿಲ್ಲ. ಈಗ 24/7 ಹೋಟೆಲ್ ತೆರೆಯಲು ಸರ್ಕಾರದಿಂದ ಅವಕಾಶ ಸಿಕ್ಕಿದೆ. ರಾತ್ರಿ ಪಾಳೆಯಲ್ಲಿ ಕೆಲಸ ಮಾಡುವವರ ಅನುಕೂಲಕ್ಕಾಗಿ ಈ ವ್ಯವಸ್ಥೆ ಜಾರಿ ಮಾಡಲಾಗಿದೆ.
ಸರ್ಕಾರದ ಆದೇಶ ಸ್ವಾಗತಿಸಿರುವ ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘ, ಪೊಲೀಸ್ ಇಲಾಖೆಯ ಅನುಮತಿಗೆ ಕಾಯುತ್ತಿವೆ. ಈ ಕುರಿತಂತೆ ಪೊಲೀಸ್ ಇಲಾಖೆಗೆ ಅನುಮತಿ ಕೋರಿ ಹೋಟೆಲ್ ಸಂಘದಿಂದ ಪತ್ರ ಬರೆಯಲಾಗಿದೆ. ಪೊಲೀಸ್ ಇಲಾಖೆಯ ಅನುಮತಿ ಸಿಕ್ಕ ತಕ್ಷಣವೇ ಹೋಟೆಲ್ಗಳಲ್ಲಿ 24/7 ಸೇವೆ ಆರಂಭವಾಗಲಿದೆ.
PublicNext
19/04/2022 08:49 pm