ಬೆಂಗಳೂರು: ದೇಶಾದ್ಯಂತ ಮಾರಣಾಂತಿಕ ಕೊರೊನಾದಿಂದ ತತ್ತರಿಸಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು (Green tax) ಅನುಷ್ಠಾನಗೊಳಿಸುವುದರ ಮೂಲಕ ಹಳೆಯ ವಾಹನ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದಂತಾಗಿದೆ.
ಹೆಚ್ಚುತ್ತಿರುವ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ನೂತನವಾಗಿ ಜಾರಿಗೊಳಿಸಿರುವ ಗುಜರಿ ನೀತಿಯಿಂದ (ಸ್ಕ್ರ್ಯಾಪ್ ನಿಯಮ) ನಗರದಲ್ಲಿ 21,96,963 ವಾಹನಗಳು ಗುಜರಿಗೆ ಸೇರಲಿವೆ. ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಹೆಚ್ಚಾಗುತ್ತಿರುವ ಕಾರಣ ಗುಜರಿ ನಿಯಮ ಜಾರಿಯಾಗಿದೆ. ಇದರನ್ವಯ ಆಯುಸ್ಸು ಮುಗಿದಿರುವ ವಾಹನಗಳನ್ನು ಗುಜರಿಗೆ ಹಾಕಬೇಕಾಗುತ್ತದೆ. ಇದರಿಂದ ಈಗಾಗಲೇ ಸಂಕಷ್ಟದಲ್ಲಿ ಇರುವ ವಾಹನ ಮಾಲೀಕರು ಹೊಸ ವಾಹನ ಖರೀದಿಸುವ ಶಕ್ತಿ ಕಳೆದುಕೊಂಡಿರುವ ಸಂದರ್ಭದಲ್ಲಿ ಬಡಪಾಯಿ ಮಾಲೀಕರಿಗೆ ಹೊರೆಯಾಗಲಿದೆ..
ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಸ್ಕ್ರ್ಯಾಪ್ ನಿಯಮ ಜಾರಿಗೊಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಈ ಹಿಂದೆಯೇ ಆದೇಶಿಸಿತ್ತು. ಬೆಂಗಳೂರು ನಗರದಲ್ಲಿ ವೈಯಕ್ತಿಕವಾಗಿ ಪ್ರಯಾಣಿಕರು ಬಳಸುತ್ತಿರುವ 18.19 ಲಕ್ಷ ವಾಹನಗಳು, ಸಾರಿಗೆಗೆ ಬಳಸುವ 92.8 ಸಾವಿರ ಮಲ್ಟಿ ಆ್ಯಕ್ಸೆಲ್ ಹಾಗೂ ಟ್ರಕ್ ಮತ್ತು ಲಾರಿಗಳು, 66.4 ಸಾವಿರ ನಾಲ್ಕು ಚಕ್ರ ಹಾಗೂ ಮೂರು ಚಕ್ರದ ಲಘು ವಾಹನಗಳು, 43.7 ಸಾವಿರ ಬಸ್‌ಗಳು, 41.069 ಸಾವಿರ ಮೋಟರ್ ಮತ್ತು ಮ್ಯಾಕ್ಸಿ ಕ್ಯಾಬ್‌ಗಳು, 1.32 ಲಕ್ಷ ಮೂರು ಚಕ್ರ ವಾಹನಗಳು ಮತ್ತು ಇತರೆ ಲಘು ಮೋಟರ್ ವಾಹನಗಳಿವೆ.
ಈ ಎಲ್ಲ ವಾಹನಗಳಿಗೆ 15 ವರ್ಷಗಳು ತುಂಬಿವೆ ಎಂದು ಸಾರಿಗೆ ಇಲಾಖೆ ಮಾರ್ಚ್ 31ರವರೆಗೆ ನೋಟಿಸ್ ನೀಡಿದೆ. ಈ ಕಾಯ್ದೆ ಏಪ್ರಿಲ್
PublicNext
31/03/2022 04:16 pm