ಬೆಂಗಳೂರು: ಮಂಟಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಕೆ ಪಾಳ್ಯದಲ್ಲಿ ನಡೆದ ಮನೆ ಬಾಗಲಿಗೆ ಇ-ಖಾತೆ ಮತ್ತು ತೆರಿಗೆ ಆಂದೋಲನ ಕಾರ್ಯಕ್ರಮದಲ್ಲಿ ಚೀಫ್ ಆಫೀಸರ್ (ಸಿಓ) ಸಂಗಪ್ಪ ಭೇಟಿ ಭಾಗಿಯಾಗಿ ಗ್ರಾಮಸ್ಥರ ಜತೆ ಸಮಾಲೋಚನೆ ನಡೆಸಿದರು.
ಇಲ್ಲಿನ ಮಂಟಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 18 ಹಳ್ಳಿಗಳಿದ್ದು, ಪ್ರತಿ ಎರಡು ದಿನಕ್ಕೊಮ್ಮೆ ಒಂದು ಹಳ್ಳಿಯಲ್ಲಿ ಇ-ಖಾತೆ ಬಗ್ಗೆ ಮತ್ತು ತೆರಿಗೆ ಆಂದೋಲನವನ್ನು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪಂಚಾಯತಿ ಪಿಡಿಓ ರಮೇಶ್, ಸಿಓ ಸಂಗಪ್ಪ ಅವರಿಗೆ ಮಾಹಿತಿ ನೀಡಿದರು.
ಇನ್ನು ಈ ಬಗ್ಗೆ ಆನೇಕಲ್ ತಾಲ್ಲೂಕಿನ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ನಾರಾಯಣಸ್ವಾಮಿ ಮಾತನಾಡಿ, 2013 ಹಾಗೂ 2014 ಕೈ ಬರಹ ಬಿಟ್ಟು ಎಲೆಕ್ಟ್ರಾನಿಕ್ ಈ ಖಾತಾ ಮಾಡುವಂತೆ ಆದೇಶದಂತೆ ಈ ಹಿನ್ನೆಲೆಯಲ್ಲಿ ಮಂಟಪ ಗ್ರಾಮ ಪಂಚಾಯತಿಯಲ್ಲಿ ಆರಂಭವಾಗಿದೆ. ಸಾರ್ವಜನಿಕರಿಂದಲೂ ಕೂಡ ಉತ್ತಮ ಸ್ಪಂದನೆ ಸಿಕ್ಕಿದೆ. ದಾಖಲೆಗಳನ್ನು ಮಾಡಿಕೊಳ್ಳಲು ಇದೊಂದು ಸೂಕ್ತ ಅವಕಾಶ ಎಂದು ತಿಳಿಸಿದರು .
Kshetra Samachara
03/03/2022 09:51 am