ಆನೇಕಲ್: ತಾಲೂಕಿನ ಎಲ್ಲಾ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸಿಕೊಡಲಾಗುವುದು. ಈ ಉದ್ದೇಶದಿಂದ ಈ ಕೆಳಕಂಡ ನಿಯಮಗಳನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ಆನೇಕಲ್ ನ ತಹಶೀಲ್ದಾರ್ ದಿನೇಶ್ ತಿಳಿಸಿದ್ದಾರೆ.
ಸರಕಾರಿ ಜಮೀನು ಲಭ್ಯವಿರುವ ಕಡೆ ಎರಡು ಎಕರೆ ಜಮೀನನ್ನು ಕಾಯ್ದಿರಿಸುವ ಬಗ್ಗೆ ಜಿಲ್ಲಾದಿಕಾರಿಗಳು ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಾಂ 61 ರ ಪ್ರಕಾರ 966 ರ ನಿಯಮ 94(a)(I) ಪ್ರಕಾರ ಜಿಲ್ಲಾಧಿಕಾರಿ ಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ. ಸರ್ಕಾರಿ ಜಮೀನನ್ನು ಕರಾಬು ಎಂದು ಘೋಷಿಸಲಾಗಿದ್ದು ಸಾರ್ವಜನಿಕ ಉದ್ದೇಶಕ್ಕಾಗಿ ಅದನ್ನು ಸ್ಮಶಾನಕ್ಕಾಗಿ ಬಳಸಬಹುದಾಗಿದೆ.
1954 ರ ಕಲಂ 71 ರ ಅನ್ವಯ ಸ್ಮಶಾನಕ್ಕೆ ಈ ಸ್ಥಳವನ್ನು ನೀಡಬಹುದಾಗಿದೆ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಸಕ್ರಮ ಜಮೀನು ಹೊರತುಪಡಿಸಿ ಸಕ್ರಮ ಪಡಿಸಲು ನೀಡುವಂತಹ ಅನರ್ಹ ಅರ್ಜಿಗಳನ್ನು ತಿರಸ್ಕಾರ ಮಾಡಿ, ಸ್ಮಶಾನಕ್ಕೆ ಕಾಯ್ದಿರಿಸಬಹುದಾಗಿದೆ.
ಈ ಎಲ್ಲಾ ನಿಯಮಗಳನ್ನು ಹೊರತುಪಡಿಸಿ ಗ್ರಾಮದಲ್ಲಿ ಸರ್ಕಾರಿ ಜಮೀನು ಇಲ್ಲದಿದ್ದರೆ ಸ್ಥಳೀಯ ಜಮೀನನ್ನು ಮೂರು ಪಟ್ಟು ಹೆಚ್ಚು ದರವನ್ನು ನೀಡಿ ಸರ್ಕಾರದ ಕಡೆಯಿಂದ ಖರೀದಿಸಿ ಸ್ಮಶಾನವಾಗಿ ಪರಿವರ್ತಿಸುವಂತಹ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.
ಯಾವುದೇ ಗ್ರಾಮದ ಜಮೀನು ಇದ್ದಲ್ಲಿ ಜನಸಾಮಾನ್ಯರು ಸ್ಮಶಾನದ ಅವಶ್ಯಕತೆ ಇದ್ದರೆ ತಾಲ್ಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಆದೇಶ ಹೊರಡಿಸಲಾಗಿದೆ ಎಂದು ತಹಶೀಲ್ದಾರ್ ದಿನೇಶ್ ಹೇಳಿದ್ದಾರೆ.
PublicNext
07/02/2022 08:05 pm