ಬೆಂಗಳೂರು:ಕಳೆದ ಕೆಲ ದಿನಗಳಿಂದ ರಾಜಾಧಾನಿಯಲ್ಲಿ ಟೋಯಿಂಗ್ ಟೈಗರ್ ಸದ್ದು ಮಾಡ್ತಿಲ್ಲ. ಕೆಲ ಘಟನೆಗಳ ಹಿನ್ನೆಲೆ ಟೈಗರ್ ವಾಹನ ತಾತ್ಕಾಲಿಕವಾಗಿ ಸ್ಟಾಪ್ ಆಗಿದೆ . ಟೋಯಿಂಗ್ ಆರಂಭಿಸೋದಾದ್ರೆ ಕಟ್ಟುನಿಟ್ಟಿನ ನಿಯಮಗಳ ಜೊತೆಯೇ ಅಂತಿದೆ ಪೊಲೀಸ್ ಇಲಾಖೆ. ಹಾಗಾದ್ರೆ ಟೋಯಿಂಗ್ ಪುನರಾರಂಭ ಆದರೆ ಯಾವೆಲ್ಲ ನಿಯಮಗಳು ಇರಲಿವೆ ಅನ್ನೋ ಒಂದಿಷ್ಟು ಮಾಹಿತಿ ಇಲ್ಲಿದೆ.
Yes. ಇತ್ತೀಚಿಗೆ ಟೋಯಿಂಗ್ ಸಿಬ್ಬಂದಿ ಸಾರ್ವಜನಿಕರೊಟ್ಟಿಗೆ ನಡೆದುಕೊಳ್ಳು ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಸದ್ಯ ಟೋಯಿಂಗ್ ನಿಲ್ಲಿಸಿರುವ ಬೆಂಗಳೂರು ಸಂಚಾರಿ ಪೊಲೀಸ್ರು ಪುನಃ ಟೋಯಿಂಗ್ ಆರಂಭಿಸಲು ಸಾಕಷ್ಟು ಕಟ್ಟುನಿಟ್ಟಿನ ರೂಲ್ಸ್ ತರಲು ಮುಂದಾಗಿದ್ದಾರೆ
ಟೋಯಿಂಗ್ ನಿಯಮಗಳು ಹೀಗಿರಲಿವೆ
ಗಂಟೆಗೆ ಗರಿಷ್ಠ 10 km ವೇಗದಲ್ಲಷ್ಟೆ ಟೋಯಿಂಗ್ ವಾಹನ ಚಲಿಸಬೇಕು.ಸೈರನ್ ಮಾಡಿಕೊಂಡೆ ಹೋಗಬೇಕು.ನೋ ಪಾರ್ಕಿಂಗ್ ನಲ್ಲಿರುವ ವಾಹನವನ್ನು ನಾಲ್ಕು ದಿಕ್ಕುಗಳಲ್ಲಿ ಪೋಟೊ ತೆಗೆಯಬೇಕು.ಐದು ನಿಮಿಷದೊಳಗಡೆ ವಾಹನದ ಮಾಲೀಕ ಬಂದೆರೆ ನೋ ಪಾರ್ಕಿಂಗ್ ದಂಡ ಕಟ್ಟಿಸಿಕೊಂಡು ಬಿಡಬೇಕು.ನೋ ಪಾರ್ಕಿಂಗ್ ನಲ್ಲಿದ ವಾಹನದ ವೀಡಿಯೋವನ್ನು 30 ದಿನ ಸುರಕ್ಷಿತವಾಗಿ ಇಡಬೇಕು. 2800 ಎಂ ಎಂ ವ್ಹೀಲ್ ಗಾತ್ರದ ವಾಹನಗಳನ್ನ ಟೋಯ್ ಮಾಡುವ ಸಾಮರ್ಥ್ಯ ಟೋಯಿಂಗ್ ವಾಹನಕ್ಕೆ ಇರಬೇಕು.
ಎರಡು ಟನ್ ಹೊರುವ ಸಾಮರ್ಥ್ಯ ಟೋಯಿಂಗ್ ವಾಹನಕ್ಕೆ ಇರಬೇಕು. ಪ್ರತಿದಿನ ಟೋಯಿಂಗ್ ಸಿಬ್ಬಂದಿ ಹಾಗೂ ಮಾಲೀಕರು ಠಾಣೆಯಲ್ಲಿ ನೋಂದಣಿ ಮಾಡಬೇಕು ಇದನ್ನು ಠಾಣಾ ಇನ್ಸಪೆಕ್ಟರ್ ಪರಿಶೀಲನೆ ಮಾಡಬೇಕು.ಟೋಯಿಂಗ್ ವೇಳೆ ವಿಡೀಯೋ ಚಿತ್ರೀಕರಣ ಕಡ್ಡಾಯ.
ಇನ್ಸಪೆಕ್ಟರ್ ಸ್ಥಳದಲ್ಲಿ ಇರುವ ಸಿಬ್ಬಂದಿ ಬಾಡಿ ಕ್ಯಾಮೆರಾದಿಂದ ಬರುವ ವಿಶ್ಯುವಲ್ ಪರೀಕ್ಷಿಸಬೇಕು. ಪವರ್ ಸ್ಟೇಯರಿಂಗ್ ಇರುವ ವಾಹನ ಬಳಸಬೇಕು.ರೊಟೇಶನ್ ಪದ್ದತಿಯಲ್ಲಿ ಎಲ್ಲ ಎಎಸ್ಐ ಗಳನ್ನು ಟೋಯಿಂಗ್ ಕಾರ್ಯಕ್ಕೆ ನೇಮಕ ಮಾಡಬೇಕು.
ಹ್ಯಾಂಡಿ ಕ್ಯಾಮೆರಾ,ಮುಂಬದಿ ಹಾಗೂ ಹಿಂಬದಿ ಎರಡೂ ಸಿಸಿ ಕ್ಯಾಮೆರಾಗಳು ಮೊಬೈಲ್ ಡಿವಿಆರ್ ಜೊತೆಗೆ ಜಿಪಿಎಸ್ ಇರಬೇಕು.
ಧ್ವನಿವರ್ಧಕ ಇರಬೇಕು.
ಹೀಗೆ ಟೋಯಿಂಗ್ ವಿಚಾರದಲ್ಲಿ ಸಾಕಷ್ಟು ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಲು ಬೆಂಗಳೂರು ಸಂಚಾರಿ ಪೊಲೀಸ್ರು ಸಿದ್ದರಾಗಿದ್ದಾರೆ. ಇದೇ ವಿಚಾರವಾಗಿ ಇಂದು ಸಂಜೆ ಗೃಹ ಸಚಿವರ ಜೊತೆ ಅಧಿಕಾರಿಗಳ ಸಭೆ ಕೂಡ ನಡೆದಿದೆ. ಇನ್ನಾದ್ರು ಸಾರ್ವಜನಿಕರಿಗೆ ಕಿರಿಕಿರಿ ತಪ್ಪುತ್ತಾ ಅನ್ನೋದನ್ನ ಕಾದು ನೋಡಬೇಕಿದೆ
Kshetra Samachara
02/02/2022 09:12 pm