ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: KIADB ಭೂ ಸ್ವಾಧೀನ ನೋಟಿಸ್ ಗೆ ರೈತರಿಂದ ಬೆಂಕಿ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಗ್ರಾಪಂನ 13 ಹಳ್ಳಿಗಳಿಂದ 1800 ಎಕರೆ ಜಾಮೀನು ಭೂ ಸ್ವಾಧೀನಕ್ಕೆ ಸರ್ಕಾರ ನೋಟಿಸ್ ನೀಡಿತ್ತು. ಪ್ರಾಣವಾದರೂ ಕೊಟ್ಟೇವು...ಆದರೆ, ಯಾವುದೇ ಕಾರಣಕ್ಕೂ ಜಮೀನು ಬಿಟ್ಟು ಕೊಡುವುದಿಲ್ಲ ಎಂದು ಚನ್ನರಾಯಪಟ್ಟಣ ಗ್ರಾಪಂನ ನೂರಾರು ರೈತರು ಪ್ರತಿಭಟನೆ ಧರಣಿ ನಡೆಸುತ್ತಿದ್ದಾರೆ.

ಇದೇ ವೇಳೆ ಸರ್ಕಾರದ ಕ್ರಮವನ್ನು ಖಂಡಿಸಿ ಭೂ ಸ್ವಾಧೀನದ ನೋಟಿಸ್ ಗೆ ಬೆಂಕಿ ಹಚ್ಚಿ ರೈತರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

ಚನ್ನರಾಯಪಟ್ಟಣ, ಗೋಕರೆ ಬಚ್ಚೇನಹಳ್ಳಿ, ಪಾಳ್ಯ, ಹರಳೂರು, ಪೋಲನಹಳ್ಳಿ, ಮಲ್ಲೇಪುರ, ಮಟ್ಟಬಾರಲು, ನಲ್ಲೂರು, ಚೀಮಾಚನಹಳ್ಳಿ, ಮುದ್ದೇನಹಳ್ಳಿ, ಎಸ್ ತೆಲ್ಲೊಹಳ್ಳಿ, ಹ್ಯಾಡಾಳ ಗ್ರಾಮಗಳ ರೈತರು ಧರಣಿಯಲ್ಲಿ ಭಾಗಿಯಾಗಿದ್ದಾರೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಗಿ, ಜೋಳ, ದ್ರಾಕ್ಷಿ, ಬಾಳೆ, ಆಲೂಗಡ್ಡೆ, ಹೂವು- ಹಣ್ಣು, ಸೊಪ್ಪು ಇತ್ಯಾದಿ ತರಕಾರಿ ಬೆಳೆಯಲಾಗುತ್ತದೆ.

ಈಗಾಗಲೇ KIADB ಎರಡು ಹಂತಗಳಲ್ಲಿ 7000 ಸಾವಿರ ಎಕರೆಗೂ ಅಧಿಕ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದೆ. ಇದೀಗ 3ನೇ ಹಂತದ ಹೆಸರಲ್ಲಿ ಮತ್ತೆ 3000 ಸಾವಿರ ಎಕರೆಗೂ ಹೆಚ್ಚು ಜಮೀನಿನ ಸ್ವಾಧೀನಕ್ಕೆ ಮುಂದಾಗಿದ್ದು, ಇದು ಖಂಡನೀಯ. ಯಾವುದೇ ಕಾರಣಕ್ಕೂ ಭೂ ಸ್ವಾಧೀನಕ್ಕೆ ಬಿಟ್ಟು ಕೊಡುವುದಿಲ್ಲ ಎಂದು ರೈತರು ಖಡಕ್‌ ಆಗಿ ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

28/01/2022 05:10 pm

Cinque Terre

1.17 K

Cinque Terre

0

ಸಂಬಂಧಿತ ಸುದ್ದಿ