ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಇಂದು ವಯೋ ನಿವೃತ್ತಿ

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಇಂದು ವಯೋನಿವೃತ್ತಿಯಾಗಲಿದ್ದಾರೆ. ಈ ಸಂದರ್ಭ ಲೋಕಾಯುಕ್ತ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ನಡೆಸಿ ನ್ಯಾಯಮೂರ್ತಿಗಳು ಮಾತನಾಡಿದರು.

ತಮ್ಮ ಅವಧಿಯಲ್ಲಿ ಆದ ಕಾರ್ಯಗಳು, ವಿವಿಧ ಪ್ರಕರಣಗಳ ತನಿಖಾ ಹಂತಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಸಮಾಜ ಸೇವೆ ಉದ್ದೇಶವನ್ನಿಟ್ಟುಕೊಂಡು ಈ ಕೆಲಸಕ್ಕೆ ಬಂದವನು ನಾನು. ನನ್ನ ಅಧಿಕಾರದ ಅವಧಿಯಲ್ಲಿ ಯಾವ ಕೆಲಸದಲ್ಲಿಯೂ ಒತ್ತಡ ಬಂದಿಲ್ಲ. ಎಲ್ಲ ಕೆಲಸವನ್ನೂ ತ್ವರಿತವಾಗಿ ದಕ್ಷತೆಯಿಂದ ಮಾಡಿದ್ದೇನೆ.

ಈ ಸಂದರ್ಭ ಎಸಿಬಿ ಕುರಿತು ಮಾತನಾಡಿದ ವಿಶ್ವನಾಥ ಹೆಗ್ಡೆ, ಎಸಿಬಿಯವರು ಪ್ರಕರಣವನ್ನು ಅಚ್ಚುಕಟ್ಟಾಗಿ ತನಿಖೆ ನಡೆಸಬೇಕಾಗುತ್ತೆ.

ಎಸಿಬಿ ತನಿಖೆ ನಡೆಸದಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಲೋಕಾಯುಕ್ತ ತನಿಖೆ ನಡೆಸಬಹುದಾಗಿ ಎಂದು ಪರೋಕ್ಷವಾಗಿ ಎಸಿಬಿಗೂ ವಾರ್ನ್ ಮಾಡಿದರು. ‌ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಕಳಿಸುವ ಅಧಿಕಾರ ಲೋಕಾಯುಕ್ತಿದೆ ಎಂದು ಹೇಳಿದ ಅವರು, ಎಸಿಬಿ ರದ್ದಾಗಿ ಲೋಕಾಯುಕ್ತಕ್ಕೆ ಆ ಅಧಿಕಾರ ಸಿಗಬೇಕು ಎಂದರು.

Edited By :
Kshetra Samachara

Kshetra Samachara

24/01/2022 02:45 pm

Cinque Terre

242

Cinque Terre

0

ಸಂಬಂಧಿತ ಸುದ್ದಿ