ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

104 ಸಹಾಯವಾಣಿಗೆ ಆರೋಗ್ಯ ಇಲಾಖೆಯಿಂದ ಶೀಘ್ರವೇ ಮರುಜೀವ

ಬೆಂಗಳೂರು:104 ಸಹಾಯವಾಣಿ ಕೇಂದ್ರಕ್ಕೆ ಮರು ಜೀವ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ. ಕೋವಿಡ್ ಟೈಮ್ ಅಲ್ಲಿ ಮೂರು ಪಾಳಿಯಲ್ಲಿ ಈ ಸಹಾಯವಾಣಿಯ ಸಿಬ್ಬಂದಿ ಕೆಲಸ ಮಾಡಿದೆ. ಆದರೂ ಸಿಬ್ಬಂದಿಗೆ ಸರಿಯಾಗಿ ಸಂಬಳ ಕೊಡದೆ ಇರೋ ಕಾರಣ ಇದು ಬಂದ್ ಆಗಿತ್ತು.

ಆದರೆ ಈಗ ಸಹಾಯವಾಣಿ ಮರು ಜೀವ ಪಡೆಯುತ್ತಿದೆ.104 ಸಹಾಯವಾಣಿ ಸೇವೆ ಗುತ್ತಿಗೆ ಪಡೆದಿದ್ದ ಪಿರಾಮಲ್ ಸಂಸ್ಥೆ ಜಾಗಕ್ಕೆ ಬೇರೆಯವರಿಗೆ ಗುತ್ತಿಗೆ ಕೊಡಲು ನಿರ್ಧರಿಸಲಾಗಿದೆ.

ಮಾರ್ಚ್-31 ರ ಒಳಗೆ ಹೊಸ ಕಂಪನಿಗೆ ಗುತ್ತಿಗೆ ನೀಡಲಾಗುತ್ತಿದ್ದು ತಾತ್ಕಾಲಿಕವಾಗಿಯೇ 104 ಸಹಾಯವಾಣಿ ಆರಂಭ ಕ್ಕೆ ಬೇರೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

23/01/2022 10:12 pm

Cinque Terre

848

Cinque Terre

0

ಸಂಬಂಧಿತ ಸುದ್ದಿ