ರಮಣ್ ಗುಪ್ತಾ ಸಿಸಿಬಿ ಜಂಟಿ ಆಯುಕ್ತ. ಇಡಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರೋ ಖಡಕ್ ಆಫೀಸರ್. ಇಡಿಯಲ್ಲಿ ಕೆಲಸ ಮಾಡೋವಾಗ್ಲೇ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ರು. ಕೆಲ ತಿಂಗಳಿನಿಂದ ಸಿಸಿಬಿ ಜಂಟಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಿಸಿಬಿಗೆ ಬಂದಾಗಿನಿಂದ ಮಾಹಿತಿ ಕಲೆ ಹಾಕ್ತಿದ್ದ ರಮಣ್, ಸದ್ಯ ಫುಲ್ ಟೈಂ ಆಕ್ಟೀವ್ ಆಗಿದ್ದಾರೆ. ಸಿಸಿಬಿ ಮುಖ್ಯವಾಗಿ ಅಕ್ರಮ ಚಟುವಟಿಕೆ, ರೌಡಿ ನಿಗ್ರಹಕ್ಕೆ ಒತ್ತು ನೀಡುತ್ತೆ. ಅದ್ರಲ್ಲೂ ಚುನಾವಣೆ ಹತ್ತಿರ ಬರ್ತಿದ್ದಂತೆ ರೌಡಿಗಳ ಹವಾ ಜೋರಾಗುತ್ತೆ. ರಾಜಕಾರಣಿ ಜತೆ ಗುರುತಿಸಿಕೊಳ್ಳೋದು, ಫ್ಲೆಕ್ಸ್- ಬ್ಯಾನರ್ ಹಾಕಿಸಿ ಪೋಸ್ ಕೋಡೋದು ಕಾಮನ್.
ರೌಡಿಗಳ ಓಟಕ್ಕೆ ಬ್ರೇಕ್ ಹಾಕಲು ಹೊಸ ತಂತ್ರ ರೂಪಿಸಿದ್ದು ಇದೇ ಸಿಸಿಬಿ. ರೌಡಿ ಪರೇಡ್ ಗೆ ಬ್ರೇಕ್ ಹಾಕಿ ರೌಡಿಸ್ಕ್ವಾಡ್ ನಿಂದ ಇಂಥದೊಂದು ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ. ರಿಯಲ್ ಎಸ್ಟೇಟ್ , ಮಾಫಿಯಾ, ಹಫ್ತಾ ವಸೂಲಿ ಅಂತ ಆಕ್ಟೀವ್ ರೌಡಿ ಶೀಟರ್ ಗಳ ಸರ್ಜರಿಗೆ ತಂತ್ರ ರೂಪಿಸಿದ್ದಾರೆ. ರಾತ್ರೋರಾತ್ರಿ ರೌಡಿಗಳ ಮನೆಗಳಲ್ಲಿ ಸರ್ಚ್ ಮಾಡಿಸಿ ಅವ್ರ ಆಕ್ಟಿವಿಟೀಸ್ ಜತೆ ಬ್ಯಾಂಕ್ ಖಾತೆ, ಆಸ್ತಿ ವಿವರವನ್ನೂ ಕಲೆ ಹಾಕ್ತಿದ್ದಾರೆ.
ಇಷ್ಟು ದಿನ ರೌಡಿಗಳು ಸಿಸಿಬಿ ಕಚೇರಿಗೆ ಬಂದ್ರೆ ಆಧಾರ್ ಕಾರ್ಡ್, ಓಟರ್ ಐಡಿ ಮಾತ್ರ ತರ್ತಿದ್ರು. ಆದ್ರೆ, ಈಗ ಪಾಸ್ ಬುಕ್, ಪಾನ್ ಕಾರ್ಡ್, ಆಧಾರ್ ಎಲ್ಲವನ್ನೂ ತರಬೇಕು. ಜತೆಗೆ ಕುಟುಂಬದ ಆರ್ಥಿಕ ಹಿನ್ನೆಲೆಯನ್ನೂ ಚೆಕ್ ಮಾಡ್ತಿದ್ದಾರೆ.
ರೌಡಿಶೀಟರ್ಸ್ ರಾಮ, ಕೋತಿರಾಮ, ಮುಲಾಮ, ಹನುಮಂತ, ಸೈಲೆಂಟ್ ಸುನಿಲ್ ಸೇರಿ ಕೆಲ ರೌಡಿಗಳ ಬ್ಯಾಂಕ್ ಖಾತೆ ಸೇರಿ ಪ್ರಾಪರ್ಟಿ ದಾಖಲೆ ವಶಕ್ಕೆ ಪಡೆದು ಪರಿಶೀಲನೆ ನಡೆಸ್ತಿದ್ದಾರೆ. ರೌಡಿಗಳಿಗೆ ಅಕ್ರಮ ಹಣ ಅರಿವು ನಿಂತರೆ ಅವರ ಆಟ ನಿಲ್ಲುತ್ತೆ ಅನ್ನೋದು ರಮಣ್ ಗುಪ್ತಾ ಯೋಜನೆಯಾಗಿದ್ದು, ಈ ಕಾರ್ಯದಲ್ಲಿ ಎಸಿಪಿ ಧರ್ಮೇಂದ್ರ ಆಂಡ್ ಟೀಂ ಕೆಲಸ ಮಾಡ್ತಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ
PublicNext
02/07/2022 03:38 pm