ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಅಕ್ರಮ ನಿವೇಶನಗಳ ಖಾತೆಗೆ ಖಂಡನೆ; ಪಿಡಿಓ ವಜಾಕ್ಕೆ ಗ್ರಾಮಸ್ಥರ ಆಗ್ರಹ

ದೊಡ್ಡಬಳ್ಳಾಪುರ ತಾಲೂಕಿನ ತಿಮ್ಮಸಂದ್ರ ಗ್ರಾಮದ ಸರ್ವೇ ನಂಬರ್ 22 ರ 11 ಎಕರೆ ಗೋಮಾಳ ಜಾಗಕ್ಕೆ ಗಡಿ ಸಮಸ್ಯೆ ಎದುರಾಗಿದೆ. ಸರ್ಕಾರಿ ಗೋಮಾಳ ಜಾಗದಲ್ಲಿ ನಿವೇಶನಗಳನ್ನ ಮಾಡಿ, ಈ ನಿವೇಶನಗಳಿಗೆ ಕಂಟನಕುಂಟೆ ಗ್ರಾಮ ಪಂಚಾಯತಿಯಲ್ಲಿ ಖಾತೆ ಮಾಡಲಾಗಿದೆ. ಆದರೆ ಈ ಜಾಗ ರಾಜಘಟ್ಟ ಪಂಚಾಯಿತಿಗೆ ಸೇರಿದ್ದು, ಅಕ್ರಮ ಖಾತೆಗಳ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಪಿಡಿಓ ನಂದಿನಿ 2020 ರಲ್ಲಿ ಅಕ್ರಮ ಖಾತೆಗಳನ್ನ ವಜಾ ಮಾಡುವಂತೆ ಕಾರ್ಯನಿರ್ವಾಹಕ ಅಧಿಕಾರಿಗೆ ವರದಿ ಸಲ್ಲಿಸಿದರು.

ಅಕ್ರಮ ಖಾತೆಗಳ ವಜಾಕ್ಕೆ ಪತ್ರ ಬರೆದ ಇದೇ ಪಿಡಿಓ ನಂದಿನಿ 2022ರಲ್ಲಿ ಕೆ.ಪಿ.ಚಂದ್ರಕಲಾರವರಿಂದ ಲಂಚ ಪಡೆದು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದಲ್ಲದೆ ಮನೆ ನಿರ್ಮಾಣಕ್ಕೆ ಅನುಮತಿ ಮತ್ತು ಸರ್ಕಾರಿ ಗ್ರ್ಯಾಂಟ್ ನೀಡಿದ್ದಾರೆಂದು ರಾಜಘಟ್ಟದ ನಿವಾಸಿ ನಾರಾಯಣಸ್ವಾಮಿ ನೇರ ಆರೋಪ ಮಾಡಿದ್ದಾರೆ. ಪಿಡಿಓರವರನ್ನ ಕೆಲಸದಿಂದ ವಜಾ ಮಾಡುವಂತೆ ಕಾರ್ಯ ನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜಘಟ್ಟ ಮತ್ತು ಕಂಟನಕುಂಟೆ ಗ್ರಾಮ ಪಂಚಾಯತ್ ಪಿಡಿಓ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಪಿಡಿಓ ನಂದಿನಿ ಹೇಳಿದ್ದು ಹೀಗೆ…

ಒಟ್ಟಾರೆ ತಕ್ಷಣವೇ ಸರ್ವೆ ನಂಬರ್ 22ರ ಗಡಿ ವಿವಾದ ಇತ್ಯರ್ಥ ಮಾಡಿ ಸರ್ಕಾರಿ ಜಾಗವನ್ನ ರಕ್ಷಣೆ ಮಾಡಿ ಈ ಜಾಗವನ್ನ ಸಾರ್ವಜನಿಕ ಬಳಕೆಯಾಗುವಂತೆ ನೋಡಿಕೊಳ್ಳ ಬೇಕಿದೆ.

ಗುರುಪ್ರಸಾದ್, ಪಬ್ಲಿಕ್ ನೆಕ್ಸ್ಟ್, ದೊಡ್ಡಬಳ್ಳಾಪುರ

Edited By :
PublicNext

PublicNext

07/07/2022 02:47 pm

Cinque Terre

38.02 K

Cinque Terre

1

ಸಂಬಂಧಿತ ಸುದ್ದಿ