ಸಿಲಿಕಾನ್ ಸಿಟಿಯಲ್ಲಿ ಪಾರ್ಕಿಂಗ್ ಸಮಸ್ಯೆ ಪೆಡಂಭೂತವಾಗಿ ಕಾಡುತ್ತಿದೆ. ಈಗೇನೋ ಕಾಮನ್ ಏರಿಯಾಗಳಲ್ಲಿ ವಾಹನಗಳ ನಿಲುಗಡೆ ಮಾಡಲಾಗ್ತಿದೆ. ಆದರೆ ಇನ್ಮುಂದೆ ಕಾಮನ್ ಏರಿಯಾಗಳಲ್ಲಿ ಕಾರು ಪಾರ್ಕಿಂಗ್ ಮಾಡುವ ಹಾಗಿಲ್ಲ. ಯಾಕೆ ಅಂತೀರಾ? ಈ ಸ್ಟೋರಿ ನೋಡಿ.
ಅಂದಹಾಗೆ ನಗರದ ಬಹುತೇಕ ಅಪಾರ್ಟ್ ಮೆಂಟ್, ಮನೆಗಳ ಮುಂದೆ ಕಾರುಗಳನ್ನು ನಿಲ್ಲಿಸಿ ನಿವಾಸಿಗರ ಆಕ್ರೋಶಕ್ಕೆ ಕಾರಣವಾಗ್ತಾಯಿತ್ತು. ಇದೀಗ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಪ್ರಕಾರ ಓಪನ್ ಪಾರ್ಕಿಂಗ್ ಏರಿಯಾ, ಫುಟ್ ಪಾತ್, ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಕೂಡದು. ಸಾಮಾನ್ಯ ಜಾಗದ ಬಳಕೆ ಇನ್ನು ಮುಂದೆ ನಿವಾಸಿಗರ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿದೆ.
ಇನ್ನು ಅಪಾರ್ಟ್ ಮೆಂಟ್ ಗಳಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡದೇ ಕಾಮನ್ ಏರಿಯಾ ಬಳಕೆಗೆ ಬಿಲ್ಡರ್ಸ್ ಗಳು ಮುಂದಾಗುತ್ತಿದ್ದರು. ಈ ಬಗ್ಗೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಿಲ್ಡರ್ಸ್ ಗಳ ನಡುವೆ ಜಟಾಪಟಿಗೆ ಕಾರಣ ಆಗ್ತಾಯಿತ್ತು. ಅಂತಿಮವಾಗಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘದ ಪರ ಆದೇಶ ನೀಡಿದೆ. ಹೀಗಾಗಿ ಓಪನ್ ಪಾರ್ಕಿಂಗ್ ಏರಿಯಾ ಅಂತಾ ಮನೆ ಮುಂದೆ ವೆಹಿಕಲ್ ನಿಲ್ಲಿಸುವ ಮುನ್ನ ಹುಷಾರ್…
ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
24/06/2022 08:17 pm