ಬೆಂಗಳೂರು: ಇಂದು ಯುದ್ಧಗ್ರಸ್ತ ಯುಕ್ರೇನ್ ನಿಂದ 14ನೇ ತಂಡವಾಗಿ ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 13 ಮಂದಿ ವಿದ್ಯಾರ್ಥಿಗಳು ಇಂದು ಆಗಮಿಸಿದರು.
ಸುರಕ್ಷಿತವಾಗಿ ವಾಪಸ್ಸಾದ ಮಕ್ಕಳನ್ನು ಕಂಡು ಟರ್ಮಿನಲ್ ನಲ್ಲೇ ಪೋಷಕರು ಖುಷಿ ಪಟ್ಟರು.ಆಪರೇಷನ್ ಗಂಗಾ ಹೆಸರಿನಡಿ ಭಾರತ ಸರ್ಕಾರ ಕಾರ್ಯಾಚರಣೆ ಮೂಲಕ ತವರಿಗೆ ನಮ್ಮ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ತಿದೆ.
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಪೋಷಕರು ಸಂತಸ ವ್ಯಕ್ತಪಡಿಸಿದರು.
PublicNext
04/03/2022 07:14 pm