ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೃತ ಅಶ್ವಿನ್ ಕುಟುಂಬಕ್ಕೆ ಉಚಿತ ಸೈಟ್ ನೀಡುತ್ತೇನೆ: ಶಾಸಕ ಎಸ್ಆರ್ ವಿಶ್ವನಾಥ್ ಹೇಳಿಕೆ

ಬೆಂಗಳೂರು: ಯಲಹಂಕ ಕ್ಷೇತ್ರದ ಮುನೇಶ್ವರ ಲೇಔಟ್ನಲ್ಲಿ ರಸ್ತೆಗುಂಡಿಗೆ ಬಿದ್ದು ಬೈಕ್ ಸವಾರ ಅಶ್ವಿನ್ ಬಲಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.‌ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ಅಶ್ವಿನ್ ಕುಟುಂಬದವರಿಗೆ ಉಚಿತವಾಗಿ ಸರ್ಕಾರದಿಂದ ನಿವಾಸ ನೀಡಲಾಗುತ್ತದೆ. ಸರ್ಕಾರದಿಂದ‌ ಉಚಿತವಾಗಿ ಮನೆ ಕೊಡಿಸುವ ಕೆಲಸ ಮಾಡುತ್ತೇನೆ. ಶಾಸಕನಾಗಿ 20X30 ಅಳತೆಯ ಸೈಟ್‌ ಉಚಿತವಾಗಿ ನೀಡುತ್ತೇನೆ. ಹಾಗೇ 20X30 ಅಳತೆ ಸೈಟ್‌ನಲ್ಲಿ ಉಚಿತವಾಗಿ ಮನೆ ಕಟ್ಟಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ರಸ್ತೆ ಚೆನ್ನಾಗಿದೆ. ಮ್ಯಾನ್‌ಹೋಲ್‌ನಿಂದ ಅಪಘಾತ ಸಂಭವಿಸಿದೆ. ಅನಧಿಕೃತವಾಗಿ ಸಂಪರ್ಕ ನೀಡಲಾಗಿದೆ. ಎಫ್ಐಆರ್ ದಾಖಲಿಸುತ್ತೇವೆ. ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಪರಿಹಾರದ ಬಗ್ಗೆ ಪಾಲಿಕೆ ಮುಖ್ಯ ಆಯುಕ್ತರ ಜತೆ ಚರ್ಚಿಸಿದ್ದೇನೆ. ಸಿಎಂ ಬೊಮ್ಮಾಯಿ ಗಮನಕ್ಕೆ ತಂದು ಪರಿಹಾರ ಘೋಷಿಸುತ್ತೇವೆ ಎಂದು ಶಾಸಕ ಎಸ್.ಆರ್.‌ವಿಶ್ವನಾಥ್ ತಿಳಿಸಿದ್ದಾರೆ.

Edited By : Manjunath H D
PublicNext

PublicNext

14/03/2022 07:31 pm

Cinque Terre

42.39 K

Cinque Terre

4

ಸಂಬಂಧಿತ ಸುದ್ದಿ