ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಮೇಳೈಸಿದ ಡಾ.ರಾಜ್, ಅಪ್ಪು ವೈಭೋಗ...

ಬೆಂಗಳೂರು: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್‌ರ ವೈಭೋಗ ಮೇಳೈಸಿದೆ. ಪುನೀತ್ ಬಾಲ್ಯದಿಂದಲೂ ಜನರ ಮನಸ್ಸನ್ನು ಸೂರೆಗೊಳಿಸಿದ ರೀತಿಯನ್ನು ವೈಭವಯುತವಾಗಿ ತೋರಿಸಲಾಗಿದೆ. 212 ನೇ ಫಲಪುಷ್ಪ ಪ್ರದರ್ಶನವನ್ನು ಬಹಳ ವಿಶಿಷ್ಟವಾಗಿ ಆಯೋಜನೆ ಮಾಡಲಾಗಿದೆ.

ಗಾಜಿನ ಮನೆಯ ಮುಖ್ಯದ್ವಾರದ ಎಡಭಾಗದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಬಲಬದಿಯಲ್ಲಿ ಡಾ.ರಾಜ್ ಕುಮಾರ್‌ರ ಚಿನ್ನದ ಬಣ್ಣದ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಅಪ್ಪ ಮಗನ ಚಿಕ್ಕದಾದ ಪುತ್ಥಳಿಗಳು ಹೂವಿನ ಅಲಂಕಾರದೊಂದಿಗೆ ನೋಡುಗರನ್ನು ಆಕರ್ಷಿಸುತ್ತವೆ.

ಮಂತ್ರಾಲಯದ ರಾಘವೇಂದ್ರ ಸ್ವಾಮಿಯಾಗಿ ಹಾಗೇ ಬೇಡರ ಕಣ್ಣಪ್ಪನಾಗಿ ಡಾ. ರಾಜ್ ಕುಮಾರ್ ಶಿವಲಿಂಗದ ಮೇಲೆ ಕಾಲನ್ನಿಡುವ ದೃಶ್ಯವು ಪುಷ್ಪಾಲಂಕೃತವಾಗಿದೆ. ಶಕ್ತಿಧಾಮವನ್ನು ಪುಷ್ಪದಲ್ಲೂ ನಿರ್ಮಾಣ ಮಾಡಿ ಅದರ ಮುಂದೆ ಪುನೀತ್ ಪುತ್ಥಳಿಯನ್ನು ಇಡಲಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ಗಣೇಶ್ ಹೆಗಡೆ ನೀಡಿರುವ ವರದಿ ಇಲ್ಲಿದೆ.

Edited By : Somashekar
PublicNext

PublicNext

05/08/2022 07:34 pm

Cinque Terre

23.13 K

Cinque Terre

0

ಸಂಬಂಧಿತ ಸುದ್ದಿ