ಬೆಂಗಳೂರು: ಏಕಾಏಕಿ ಸುರಿದ ಗಾಳಿ ಮತ್ತು ಭಾರಿ ಮಳೆಗೆ ಕೆರೆಯಲ್ಲಿ ಬೋಟಿಂಗ್ ಮಾಡುತ್ತಿದ್ದ ಪ್ರವಾಸಿಗಳು ಭಯಬೀತರಾಗಿದ್ದಾರೆ. ಏಕಾಏಕಿ ಸುರಿದ ಭಾರಿ ಗಾಳಿ ಮತ್ತು ಮಳೆಯ ಕಾರಣ, ಬೋಟ್‌ಗಳು ಗಾಳಿಯ ದಿಕ್ಕಿನ ಕಡೆಗೆ ಸಾಗಲು ಪ್ರಾರಂಭಿಸಿದೆ. ಮತ್ತು ವಿಪರೀತ ಗಾಳಿಯಿಂದ ಕೆರೆಯಲ್ಲಿ ಸಮುದ್ರದಂತೆ ಅಲೆಗಳು ಸೃಷ್ಟಿಯಾಗಿದ್ದವು.
ಈ ಘಟನೆ ಮಡಿವಾಳ ಕೆರೆಯಲ್ಲಿ ನಡೆದಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚೆತ್ತುಕೊಂಡು ಮಳೆ ಗಾಳಿಯಲ್ಲಿ ಸಿಲುಕಿದ್ದ ಬೋಟ್‌ಗಳನ್ನು ರಕ್ಷಿಸಿದ್ದಾರೆ. ಕೆಲಕಾಲ ಸುರಿದ ಭಾರೀ ಮಳೆ ಮತ್ತು ಗಾಳಿಗೆ ಬೋಟಿಂಗ್ ಹೋಗಿದ್ದ ಪ್ರವಾಸಿಗರು ಭಯಬೀತಗೊಂಡಿದ್ದರು. ಕೆಲ ಗಂಟೆಗಳ ಕಾಲ ಬೋಟಿಂಗ್ ನಿಲ್ಲಿಸಿ ಮತ್ತೆ ವಾತಾವರಣ ಸಹಜವಾಗುತ್ತಿದ್ದಂತೆ ಪ್ರಾರಂಭಿಸಲಾಯಿತು.
PublicNext
28/07/2022 01:57 pm