ಬೆಂಗಳುರು : ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಫ್ಲವರ್ ಶೋ ನೋಡಲು ಬೆಳಗಿನಿಂದ ಸಾವಿರಾರು ಜನ ಲಾಲ್ ಬಾಗ್ ಕಡೆ ಬರುತ್ತಿದ್ದಾರೆ. ಇಷ್ಟು ವರ್ಷಗಳು ಎಂದು ನೋಡದ ಜನಸಾಗರ ಫ್ಲವರ್ ಶೋ ನೋಡಲು ಬರುತ್ತಿದ್ದಾರೆ.
ರಸ್ತೆ ಮೇಲೆ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದ್ದು ಜನ ಟ್ರಾಫಿಕ್ ಜಾಮ್ ನಡುವೆಯೇ ಲಾಲ್ ಬಾಗ್ ಫ್ಲವರ್ ಶೋ ನೋಡಲು ಬರುತ್ತಿದ್ದಾರೆ.
ಟ್ರಾಫಿಕ್ ಪೊಲೀಸರು ಲಾಲ್ ಬಾಗ್ ಮುಖ್ಯದ್ವಾರ ರಸ್ತೆ ಬಂದ್ ಮಾಡಿದ್ದಾರೆ ಮತ್ತು ರಸ್ತೆ ಉದ್ದಕ್ಕೂ ಜನರೇ ಕಂಡುಬರುತ್ತಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನವೀನ್ ನೀಡಿರುವ ವರದಿ ಇಲ್ಲಿದೆ ನೋಡಿ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
15/08/2022 11:12 pm