ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇಶ ವಿಭಜನೆಯ ಕರಾಳ ನೆನಪಿನ ದಿನ: ಸಾಕ್ಷ್ಯಚಿತ್ರದ ಮೂಲಕ ಅನಾವರಣ

ಬೆಂಗಳೂರು - ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನ ನಾಳೆ(ಆ.೧೪) ಭಾರತ ದೇಶ ವಿಭಜನೆ ಆದ ದಿನವಾಗಿದೆ. ಹೀಗಾಗಿ ಆಗಸ್ಟ್ 14 ದೇಶ ವಿಭಜನೆಯ ಭಯಾನಕ ನೆನಪಿನ ದಿನವನ್ನಾಗಿ ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಆಚರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ, ನಗರದ ಟೌನ್ ಹಾಲ್ ನಲ್ಲಿ ಸ್ವಾತಂತ್ರ್ಯ ಪೂರ್ವದ ಸಾಕ್ಷ್ಯ ಚಿತ್ರವನ್ನು ಏರ್ಪಡಿಸಿದೆ. ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಘಟನೆ, ಹೋರಾಟ, ಅನುಭವಿಸಿದ ನೋವು, ಸಭೆ ಇತ್ಯಾದಿಗಳನ್ನು ಸಾಕ್ಷ್ಯ ಚಿತ್ರಗಳಲ್ಲಿ ಕಾಣಬಹುದು.

ಇನ್ನೂ ವಿಭಜನೆಯ ಹಿನ್ನೆಲೆ ಏನಂದ್ರೆ ಪಾಕಿಸ್ತಾನವನ್ನು 14 ಆಗಸ್ಟ್ 1947 ರಂದು ಮತ್ತು ಭಾರತವನ್ನು 15 ಆಗಸ್ಟ್ 1947 ರಂದು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಲಾಯಿತು. ಈ ವಿಭಜನೆಯ ಮೂಲಕ ಭಾರತವನ್ನು ಎರಡು ಭಾಗಗಳಾಗಿ ವಿಂಗಡಿಸುವುದರ ಜೊತೆಗೆ ಬಂಗಾಳವನ್ನು ಕೂಡ ವಿಭಜಿಸಲಾಯಿತು ಮತ್ತು ಬಂಗಾಳದ ಪೂರ್ವ ಭಾಗವನ್ನು ಭಾರತದಿಂದ ಬೇರ್ಪಡಿಸಿ ಪೂರ್ವ ಪಾಕಿಸ್ತಾನವನ್ನು ರೂಪಿಸಲಾಯಿತು.

ಆ ಸಂದರ್ಭದಲ್ಲಿ‌ ಹೋರಾಟ, ಹಿಂದೂ - ಮುಸ್ಲಿಂ ಧರ್ಮದ ನಡುವಿನ ಸಂಘರ್ಷ, ಸಭೆ, ಊಟಕ್ಕಾಗಿ ಪರದಾಡುವ ಜನರು, ಒಬ್ಬರ ಭಾರವನ್ನು ಮತ್ತೊಬ್ಬರು ಹೊರುವ ಚಿತ್ರಗಳು ಮನಕಲುಕುವಂತಿದೆ.

Edited By : Somashekar
PublicNext

PublicNext

13/08/2022 06:01 pm

Cinque Terre

26.14 K

Cinque Terre

0

ಸಂಬಂಧಿತ ಸುದ್ದಿ