ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯುದ್ಧ ಐತಿಹಾಸಿಕ ಸತ್ಯ, ಶಾಂತಿ ಬುದ್ದಿಜೀವಿಗಳ ಕನಸು; ನಿರ್ದೇಶಕ ಜಯತೀರ್ಥ

ಬೆಂಗಳೂರು:ಯುದ್ಧ ಕಾಲದ ಸಂದಿಗ್ಧ ಸಮಯದಲ್ಲಿ ನಾಟಕ ಸಮಾಜವನ್ನು, ದೇಶಗಳ ಚಿಂತನೆಗಳನ್ನು ತಿದ್ದಬಲ್ಲವೂ ಎಂಬುದಕ್ಕೆ ಬೆಂಗಳೂರಿನ ಸಮಷ್ಟಿ ತಂಡದ ನಾಟಕೋತ್ಸವ ಉತ್ತಮ ವೇದಿಕೆಯಾಗಿತ್ತು. ನಾಟಕೋತ್ಸವದಲ್ಲಿ ಭಾಗಿಯಾಗಿ 'We Teach Life' ನಾಟಕ ನೋಡಿದ 'ಬೆಲ್-ಬಾಟಮ್' ಖ್ಯಾತಿಯ ನಿರ್ದೇಶಕ ಜಯತೀರ್ಥ, ನಾಟಕ ಜೀವನದ ಸಾರ. ಸದ್ಯ ರಷ್ಯಾ&ಉಕ್ರೇನ್ ನಡುವಿನ‌ ಯುದ್ಧ ಜೀವನಾಶಕ್ಕೆ ದಾರಿಯಾಗ್ತಿದೆ. ಯುದ್ಧ ಯಾರಿಗೂ ಬೇಡ, ಪ್ರೀತಿ ಎಲ್ಲರಿಗೂ ಬೇಕು ಎಂದರು. ನಾಟಕೋತ್ಸವದ ಯಶಸ್ಸಿಗಾಗಿ ಸಮಷ್ಟಿ ತಂಡಕ್ಕೆ ಅಭಿನಂದಿಸಿದರು.

ಎರಡು ದಶಕಗಳಿಂದ ಬೆಂಗಳೂರಿನ ಸಮಷ್ಟಿ ಕಲಾ ತಂಡ ರವೀಂದ್ರ ಪೂಜಾರ್ ನೇತೃತ್ವದಲ್ಲಿ ತನ್ನ ವಿಶೇಷ ಪ್ರಯೋಗ, ರಂಗ ಚಟುವಟಿಕೆಗಳಿಂದ ಖ್ಯಾತಿ ಪಡೆಯುತ್ತಿದೆ.ಮಾರ್ಚ್ ಮೊದಲ ವಾರ ಬೆಂಗಳೂರಿನ ADA ರಂಗಮಂದಿರದಲ್ಲಿ ನಾಟಕೋತ್ಸವ ಆಯೋಜಿಸಿದೆ. ಮಂಗಳೂರಿನ ಅಸ್ಥಿತ್ವ ತಂಡ 'ಅರುಣ್ ಲಾಲ್' ನಿರ್ದೇಶನದ 'ಕಂಡೋನಿಯನ್ಸ್' ನಾಟಕ ಪ್ರದರ್ಶನ ಕಂಡಿತು. ಮನುಷ್ಯನ ಆಸೆ, ಸ್ಥಿತಿ, ಬಡತನ ಹೇಗೆ ದುರ್ಬಳಕೆ ಆಗ್ತದೆ ಎಂಬುದನ್ನು ನಾಟಕದಲ್ಲಿ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಇನ್ನು ಉಡುಪಿಯ 'ಸಂಗಮ ಕಲಾವಿದೆರ್' ತಂಡ ಯುದ್ಧದ ಪರಿಣಾಮಗಳ ಬಗ್ಗೆ ಮನಮುಟ್ಟುವಂತೆ ಅಭಿನಯಿಸಿತು. ಯುದ್ಧ ಯಾರಿಗೂ ಬೇಡ, ಎಲ್ಲಾ ಪ್ರೀತಿ‌ ಹಂಚೋಣ ಎಂಬ ಸಂದೇಶ ಸಾರಿತು.

ಕೊನೆಯದಾಗಿ ಹಾವೇರಿಯ 'ಶೇಷಗಿರಿ ಕಲಾತಂಡ'ವು ಕುವೆಂಪು ರವರ ರಾಮಾಯಣದರ್ಶನಂನ 'ವಾಲಿವಧೆ' ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿತು. ಈ ನಾಟಕದಲ್ಲೂ ಸಹ ಯುದ್ಧ ಯಾರಿಗೂ ಬೇಡ, ಪ್ರೀತಿ-ಆದರ್ಶ ಶಾಶ್ವತ ಎಂಬ ಸಂದೇಶ ಮುಖ್ಯವಾಗಿತ್ತು. ಕೊರೊನಾ ಸಂಕಷ್ಟದ ವೇಳೆ ಬೆಂಗಳೂರಿನಲ್ಲೂ ನಾಟಕಗಳಿಗೆ ಪ್ರೇಕ್ಷಕರಿದ್ದಾರೆ ಎಂಬುದಕ್ಕೆ ADA ರಂಗಮಂದಿರ HouseFull ಆಗಿದ್ದೆ ನಿದರ್ಶನ.

Edited By :
Kshetra Samachara

Kshetra Samachara

10/03/2022 01:10 pm

Cinque Terre

1.99 K

Cinque Terre

0