ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ಇಂಗ್ಲಿಷ್ ನಡುವೆ ರಾರಾಜಿಸಿದ ಕನ್ನಡದ ಧ್ವನಿ: ನಮಸ್ಕಾರ ಹೇಳಿ ಶಿಳ್ಳೆ, ಚಪ್ಪಾಳೆ ಪಡೆದ ಸಿಎಂ ಬೊಮ್ಮಾಯಿ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಭಟ್ಟರಮಾರೇನಹಳ್ಳಿ ಏರೋಸ್ಪೇಸ್ ಪಾರ್ಕ್ನಲ್ಲಿ ಸ್ಯಾಫ್ರಾನ್ - ಹೆಚ್ ಎಎಲ್ ಏರ್ ಕ್ರಾಫ್ಟ್ ಇಂಜಿನ್ ಹಾಲ್ ಉದ್ಘಾಟನೆಯನ್ನು CM ನೆರವೇರಿಸಿದರು. ಈ ವೇಳೆ ಸ್ಯಾಫ್ರಾನ್ – ಹೆಚ್ ಎಎಲ್ ಅಧಿಕಾರಿಗಳು ಇಂಗ್ಲಿಷ್ ನಲ್ಲಿ ಭಾಷಣ ಮಾಡಿ‌ ಮುಗಿಸಿದ್ದರು. ನಂತರ ವೇದಿಕೆಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಕನ್ನಡದಲ್ಲಿ ನಮಸ್ಕಾರ ಎಂದ ಕೂಡಲೇ ನೆರೆದಿದ್ದ ಜನ & ‌ನೂರಾರು ಕಾರ್ಮಿಕರು ಒಂದೇ ಸಮನೆ ಹರ್ಷೋದ್ಘಾರದ ಚಪ್ಪಾಳೆ ಹೊಡೆದರು. ಆಗ ಮತ್ತೊಮ್ಮೆ ಕನ್ನಡದಲ್ಲಿ ನಮಸ್ಕಾರ ಎಂದದ್ದು‌ ಜನರ ಸಂತೋಷಕ್ಕೆ ಕಾರಣವಾಯ್ತು.

ಇನ್ನೂ ಭಾರತದಲ್ಲಿ & ನಮ್ಮ ಕರ್ನಾಟಕದಲ್ಲಿ ಅನೇಕ ಅವಕಾಶಗಳಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದರು. ಸ್ಯಾಫ್ರಾನ್ ಮತ್ತು ಹೆಚ್.ಎ.ಎಲ್, ಬಿ.ಹೆಚ್ ಇ ಎಲ್, ಬಿ.ಎ.ಎಲ್ ಹೀಗೆ ಅನೇಕ ಸಂಸ್ಥೆಗಳಲ್ಲಿ ನಮ್ಮ ಸಾಧನೆ ಎಲ್ಲರೂ ಮೆಚ್ಚುವಂತದ್ದು ಎಂದರು..

ಇದೇ ವೇಳೆ ಹೆಚ್.ಎ.ಎಲ್ ನ ಹಿರಿಯ ಅಧಿಕಾರಿಗಳು, ಸ್ಯಾಫ್ರಾನ್ ಇಂಡಿಯಾದ ಸಿಇಒ & ಸಿಬ್ಬಂದಿ, ಸಚಿವರಾದ ಮುರುಗೇಶ್ ನಿರಾಣಿ, ಶಾಸಕ ರೇಣುಕಾ ಚಾರ್ಯ ಸೇರಿದಂತೆ ಸ್ಯಾಫ್ರಾನ್ ಹೆಚ್ಎಎಲ್ ಸಹಯೋಗದ ನೂರಾರು ಜನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.. ಬೆಂಗಳೂರು ಗ್ರಾಮಾಂತರ ಪೊಲೀಸರು ಸೀಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು..

ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ದೇವನಹಳ್ಳಿ..

Edited By : Somashekar
PublicNext

PublicNext

08/07/2022 06:12 pm

Cinque Terre

51.41 K

Cinque Terre

0

ಸಂಬಂಧಿತ ಸುದ್ದಿ