ಬೆಂಗಳೂರು: ಮನುಷ್ಯನ ಹಕ್ಕು ಮತ್ತು ಕರ್ತವ್ಯಗಳ ಸಮರ್ಪಕ ಅನುಷ್ಠಾನಕ್ಕೆ ಸಂವಿಧಾನ ನಮಗೆ ದೇವಾಲಯ ಇದ್ದಂತೆ. ಸಂವಿಧಾನದ ಮೌಲ್ಯ ವೃದ್ಧಿಗೆ ಬೆಂಗಳೂರಿನ ಮತ್ತಿಕೆರೆಯ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ವತಿಯಿಂದ 'ಅಣಕು ಸಂಸತ್ತ'ನ್ನು ಏರ್ಪಡಿಸಲಾಗಿತ್ತು. ನಗರದ 35 ಕಾನೂನು ಮತ್ತು 15 ಡಿಗ್ರಿ ಕಾಲೇಜುಗಳಿಂದ ತಲಾ ಇಬ್ಬರಂತೆ 104 ವಿದ್ಯಾರ್ಥಿಗಳ ಪಾಲ್ಗೊಂಡಿದ್ದರು. ವಾಸ್ತವ ಸಂಸತ್ತೇ ನಾಚುವಂತೆ, ಯಶಸ್ವಿಯಾಗಿ ಅಣುಕು ಸಂಸತ್ತು ನಡೆಯಿತು. ಹಿರಿಯ ವಕೀಲ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್ ಭಾಗವಹಿಸಿ ಈ ರೀತಿ ಕಾರ್ಯಕ್ರಮ ಎಂದರು.
ಅಣಕು ಸಂಸತ್ತಿನಲ್ಲಿ ಪ್ರಧಾನಿ, ಸ್ಪೀಕರ್, ವಿರೋಧಪಕ್ಷದ ನಾಯಕ, ಪ್ರಜಾಪ್ರತಿನಿಧಿಗಳು ಯಾವ ಲೋಕಸಭೆ, ರಾಜ್ಯಸಭೆ ಮತ್ತು ವಿಧಾನಸಭೆ ನಾಯಕರಿಗೆ ಕಡಿಮೆ ಇಲ್ಲದಂತೆ, ವಿಷಯ ಮಂಡನೆ ಮತ್ತು ಪ್ರಶ್ನೆ ಕೇಳೋದು, ಕಾಲೆಳೆಯೋದು ಭರ್ಜರಿಯಾಗಿ ನಡೆಯಿತು.
ಅಣಕು ಸಂಸತ್ತಿನಲ್ಲಿ ಯುವಕ ಮತ್ತು ಯುವತಿಯರು ಪೈಪೋಟಿಗೆ ಬಿದ್ದು ಪ್ರಶ್ನೆ ಮತ್ತು ಉತ್ತರ ನೀಡುವ ಟೇಬಲ್ ಕುಟ್ಟಿ ಕೇಳುವ ಧೈರ್ಯ ತೋರಿದರು. ಉತ್ತಮ ಓದು, ಪ್ರತಿಭಾವಂತ ಕಾನೂನು ವಿದ್ಯಾರ್ಥಿಗಳು ಹಾಗೂ ಅಣುಕು ಸಂತ್ತಿನಲ್ಲಿ ಉತ್ತಮ ನಡವಳಿಕೆ ತೋರಿದವರಿಗೆ ಬಹುಮಾನ ಸಹ ವಿತರಿಸಿದರು.
PublicNext
13/08/2022 09:18 am