ಯಲಹಂಕ: ಪುಸ್ತಕದ ಥಿಯರಿ ಜ್ಞಾನದ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ನಾಲೆಡ್ಜ್ ಸಹ ತುಂಬಾನೆ ಮುಖ್ಯ. ಈ ನಿಟ್ಟಿನಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿನ ಖಾಸಗಿ ಕಾಲೇಜೊಂದರ 50 ಜನ ವಿದ್ಯಾರ್ಥಿಗಳು ಹೆಸರಘಟ್ಟದಲ್ಲಿರುವ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ್ದರು. ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಪ್ರಾಕ್ಟಿಕಲ್ ನಾಲೆಡ್ಜ್ ಜೊತೆ ಕಸಿ ತಂತ್ರಜ್ಞಾನ, ತಳಿ ತಂತ್ರಜ್ಞಾನ & ನರ್ಸರಿ ತಂತ್ರಜ್ಞಾನದ ಜೊತೆ ಪದವಿ ಮುಗಿದ ನಂತರ ಹೇಗೆ ಕೆಲಸ ಪಡೆದುಕೊಳ್ಳಬೇಕು ಎಂಬ ವಿಷಯಗಳ ಬಗ್ಗೆ IUHR ಸಂಸ್ಥೆಯ ಹಿರಿಯ ಅಧಿಕಾರಿಗಳ ಜೊತೆ ವಿದ್ಯಾರ್ಥಿಗಳು ಸಂವಾದ ಸಹ ನಡೆಸಲಿದ್ದಾರೆ. ಎಲ್ಲರೂ ಡಾಕ್ಟರ್, ಇಂಜಿನಿಯರ್ ಆಗಬೇಕು ಎಂದು ಹಾತೊರೆಯುತ್ತಾರೆ. ಆದರೆ, ಇತ್ತೀಚೆಗೆ ರಾಜಾಜಿನಗರದ ಖಾಸಗಿ ಸಂಸ್ಥೆಯ ವಿದ್ಯಾರ್ಥಿಗಳು ತೋಟಗಾರಿಕೆ & ಕೃಷಿ ಬಗ್ಗೆ, ತೋಟಗಾರಿಕೆ ಕ್ಷೇತ್ರದ ಬಗ್ಗೆ ಉತ್ಸುಕರಾಗಿರೋದು ಸಂತಸದ ವಿಷಯ.
SureshBabu.Public Next Devanahalli..
Kshetra Samachara
26/05/2022 06:18 pm