ಆನೇಕಲ್ : ಇದೇ ಮೊದಲ ಬಾರಿಗೆ ಶಿಕ್ಷಣ ಇಲಾಖೆ 13 ದಿನಗಳ ಮುಂಚಿತವಾಗಿ ಶಾಲಾ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕದೆ ಅದರ ಬೆನ್ನಲ್ಲೇ ಇಂದು ಮಕ್ಕಳು ಶಾಲೆಗೆ ನಗು ಮೊಗದಿಂದ ಆಗಮಿಸಿದರು.
ಹೌದು ಅನೇಕಲ್ ಪಟ್ಟದ ಸರ್ಕಾರಿ ಶಾಲೆಯಲ್ಲಿ ರಂಗೋಲಿ, ರಂಗುರಂಗಿನ ಬಂಟಿಂಗ್ಸ್, ಹಚ್ಚ ಹಸಿರಿನ ತಳಿರು, ಬಾಳೆಯ ತೋರಣ ಮಕ್ಕಳಿಗೆ ಹಬ್ಬದ ವಾತಾವರಣದ ಮೆರಗು ನೀಡಿತ್ತು. ಹೂ ಮತ್ತು ಕಲಿಕಾ ಸಾಮಗ್ರಿಗಳನ್ನು ಗಣ್ಯರು ನೀಡುವ ಮೂಲಕ ಮಕ್ಕಳಿಗೆ ಸಿಹಿ ಹಂಚಿ ಸ್ವಾಗತ ಕೋರಲಾಯಿತು.
ಎರಡು ವರ್ಷಗಳ ಕೊರೊನಾ ಬಿಡುವನ್ನು 2022-23 ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕಾ ವರ್ಷವನ್ನಾಗಿ ಘೋಷಿಸಿದ ರಾಜ್ಯ ಸರ್ಕಾರ 1-9 ನೇ ತರಗತಿಯ ಮಕ್ಕಳ ಹಿಂದಿನ ಎರಡು ವರ್ಷದ ಕಲಿಕೆಯ ಹಿಂದುಳಿಯುವಿಕೆಯನ್ನು ಸರಿಗಟ್ಟಲು ಈ ಯೋಜನೆಗೆ ಚಾಲನೆ ನೀಡಿದೆ. ಈಗಾಗಲೇ ಶಿಕ್ಷಕರಿಗೆ ಕಲಿಕಾ ಚೇತರಿಕಾ ಕೈಪಿಡಿ ಒದಗಿಸಿ ಶಿಕ್ಷಣ ಚಟುವಟಿಕೆಗೆ ಸಿದ್ದಗೊಳಿಸಲಾಗಿದೆ.
ಈ ಕೈಪಿಡಿ- ಕಲಿಕಾ ಹಾಳೆಯಂತೆ ಮಕ್ಕಳನ್ನ ತೀಡಿ ತಿದ್ದಿ ಈ ಅವಧಿಯಲ್ಲಿ ಮಕ್ಕಳ ಕಲಿಕಾ ಮಟ್ಟ ಉತ್ಸಾಹಿಸಿ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಯೋಜನೆ ಸಹಕಾರಿಯಾಗಿದೆ ಎಂದು ಶಿಕ್ಷಣಾಧಿಕಾರಿ ತಿಳಿಸಿದರು.
Kshetra Samachara
16/05/2022 10:25 pm