ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯದಲ್ಲೆ ಅತಿಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ P.U.ಪರೀಕ್ಷೆ ಪ್ರಾರಂಭ !

ಯಲಹಂಕ: ರಾಜ್ಯಾದ್ಯಂತ ಪಿ.ಯು.ಪರೀಕ್ಷೆ ಇಂದಿನಿಂದ ‌ಪ್ರಾರಂಭವಾಗಿವೆ. ಯಲಹಂಕ ಸುತ್ತಾಮುತ್ತಾ ಪರೀಕ್ಷಾ‌ ಕೇಂದ್ರಗಳಲ್ಲಿ ಪರೀಕ್ಷೆಗೆ ಬೇಕಾದ ಸಕಲ ಸಿದ್ಧತೆಗಳನ್ನು ಕಾಲೇಜುಗಳು ಮಾಡಿಕೊಂಡಿವೆ. ರಾಜ್ಯದಲ್ಲೆ ಅತಿ ಹೆಚ್ಚು P.U 2217 ವಿದ್ಯಾರ್ಥಿಗಳನ್ನು ಹೊಂದಿರುವ ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆಗೆ ಸಕಲ ವ್ಯವಸ್ಥೆಯಾಗಿದೆ.

ಪರೀಕ್ಷಾ ಕೇಂದ್ರಗಳತ್ತ ಬರುವ ಎಲ್ಲಾ ವಿದ್ಯಾರ್ಥಿಗಳ ಗುರುತಿನ‌ ಚೀಟಿ, ಆಲ್ ಟಿಕೆಟ್ ನ ಪರಿಶೀಲಿಸಿ ಒಳಗಡೆ ಬಿಡಲಾಗ್ತಿತ್ತು.ಯಲಹಂಕ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು 1,417 ಜನ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 55 ಜನ ಸಿಬ್ಬಂದಿ ಪರೀಕ್ಷಾ ಕೆಲಸಗಳಿಗೆ ನಿಯೋಜನೆ ಆಗಿದ್ದಾರೆ. ಬರುವ ವಿದ್ಯಾರ್ಥಿಗಳ ಕೊಠಡಿ, ನಂಬರ್ ನ ಪರಿಶೀಲಿಸಿ ಅವರವರ ಕೊಠಡಿಗಳತ್ತ ಪರೀಕ್ಷಾ ಸಿಬ್ಬಂದಿ ವಿದ್ಯಾರ್ಥಿಗಳನ್ನು ಕಳುಹಿಸುತ್ತಿದ್ದರು.

ಇಂದು ಐಚ್ಛಿಕ ಕಾಮರ್ಸ್ ಸಬ್ಜೆಕ್ಟ್ ಪರೀಕ್ಷೆ ಇರುವುದರಿಂದ ಪರೀಕ್ಷಾ ಕೇಂದ್ರಗಳತ್ತ‌ ನಿರ್ದಿಷ್ಟ ವಿದ್ಯಾರ್ಥಿಗಳು ಮಾತ್ರ ಆಗಮಿಸಿದ್ದಾರೆ.

ಯಲಹಂಕ ಸರ್ಕಾರಿ ಕಾಲೇಜಿಗೆ ಮೊಬೈಲ್ ಮತ್ತು ಯಾವುದೇ ಧಾರ್ಮಿಕ ಹಿತಾಸಕ್ತಿಯ ಹಿಜಾಬ್ ಆಗಲಿ, ಕೇಸರಿ ಶಾಲು, ಬಟ್ಟೆಯಾಗಲಿ, ಬುರ್ಖಾ ಆಗಲಿ ಧರಿಸಿರುವವರು ಕಂಡುಬಂದಿಲ್ಲ..

ಸುರೇಶ್ ಬಾಬು Public Next ಯಲಹಂಕ..

Edited By :
PublicNext

PublicNext

22/04/2022 11:56 am

Cinque Terre

44.45 K

Cinque Terre

0

ಸಂಬಂಧಿತ ಸುದ್ದಿ