ರಾಜಸ್ಥಾನದಲ್ಲಿ ದಲಿತ ವಿದ್ಯಾರ್ಥಿ ಮೇಲೆ ನಡೆದ ಪೈಶಾಚಿಕ ಹಲ್ಲೆ ಖಂಡಿಸಿ ಇಂದು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಬಂದ್ ಮಾಡಿ ಧರಣಿ ನಡೆಸುತ್ತಿದ್ದಾರೆ.
7 ವರ್ಷದ ಇಂದ್ರ ಮೇಘ್ವಾಲ್ ಎಂಬ ದಲಿತ ವಿದ್ಯಾರ್ಥಿ ಮೇಲೆ ಜುಲೈ 20 ರಂದು ಚಾಯಿಲ್ ಸಿಂಗ್ ಎಂಬ ಮನುವಾದಿ ಶಿಕ್ಷಕನಿಂದ ಪೈಶಾಚಿಕ ಹಲ್ಲೆ ನಡೆದಿದೆ. ಜೊತೆಗೆ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅಪರಾಧಿಗಳನ್ನು ಬಹಿರಂಗವಾಗಿ ಸನ್ಮಾನಿಸುವುದರ ಮೂಲಕ ಕೃತ್ಯವನ್ನ ಸಮರ್ಥಿಸುವ ಮನಸ್ಥಿತಿಯನ್ನ ವಿದ್ಯಾರ್ಥಿ ಒಕ್ಕೂಟ ಒಕ್ಕೂರಲಿನಿಂದ ಖಂಡಿಸಿದೆ.
ಸಂವಿಧಾನದ ಕಾನೂನುಗಳನ್ನ ಸಮರ್ಥವಾಗಿ ಅನುಷ್ಠಾನಗೊಳಿಸಿ ಈ ದೇಶದ ಶೋಷಿತರು ಆತ್ಮಗೌರವದಿಂದ ಬದುಕುವ ವಾತಾವರಣ ನಿರ್ಮಿಸಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.
PublicNext
24/08/2022 03:08 pm